ಜೈ ಭೀಮ್ ಚಿತ್ರದಲ್ಲಿ ನಟ ಸೂರ್ಯ 
ದೇಶ

ಜೈ ಭೀಮ್: ನಟ ಸೂರ್ಯಗೆ ಒದ್ದವರಿಗೆ ನಗದು ಬಹುಮಾನ ಘೋಷಿಸಿದ್ದ ಪಿಎಂಕೆ ನಾಯಕನ ವಿರುದ್ಧ ಕೇಸ್ ದಾಖಲು

ತಮಿಳು ನಟ ಸೂರ್ಯ ಅವರ ಇತ್ತೀಚಿನ ಚಿತ್ರ 'ಜೈ ಭೀಮ್' ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರಿಂದ ಟೀಕೆಗೆ ಗುರಿಯಾಗಿದೆ.  ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ...

ಚೆನ್ನೈ: ತಮಿಳು ನಟ ಸೂರ್ಯ ಅವರ ಇತ್ತೀಚಿನ ಚಿತ್ರ 'ಜೈ ಭೀಮ್' ಯಶಸ್ವಿಯಾದ ಬೆನ್ನಲ್ಲೇ ರಾಜಕೀಯ ಪಕ್ಷವೊಂದರಿಂದ ಟೀಕೆಗೆ ಗುರಿಯಾಗಿದೆ.  ನಟ ಸೂರ್ಯ ಅವರಿಗೆ ಒದ್ದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ ಪಾಟಾಲಿ ಮಕ್ಕಳ್ ಕಚ್ಚಿ(ಪಿಎಂಕೆ) ನಾಯಕನ ವಿರುದ್ಧ ಮೈಲಾಡುತುರೈ ಪೊಲೀಸರು ಬುಧವಾರ ಕೇಸ್ ದಾಖಲಿಸಿದ್ದಾರೆ.

ಸ್ಥಳೀಯ ಪಿಎಂಕೆ ನಾಯಕ ಎ ಪಳನಿಸಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ(ಐಪಿಸಿ) ಜಾಮೀನು ರಹಿತ ಸೆಕ್ಷನ್‌ಗಳು ಸೇರಿದಂತೆ ಐದು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೈ ಭೀಮ್ ಚಿತ್ರದಲ್ಲಿ ವನ್ನಿಯಾರ ಪಾತ್ರಕ್ಕೆ ಅಪವಾದವೆಂಬಂತೆ ಪಿಎಂಕೆ ಕಾರ್ಯಕರ್ತರು ಇತ್ತೀಚೆಗಷ್ಟೇ ಸೂರ್ಯ ಅಭಿನಯದ ಚಿತ್ರವೊಂದರ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದರು. ಚಿತ್ರದಲ್ಲಿ ಪಕ್ಷದ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ ಎಂದು ಪಿಎಂಕೆ ನಾಯಕರು ಆರೋಪಿಸಿದ್ದಾರೆ.

ಏತನ್ಮಧ್ಯೆ, ಪಳನಿಸಾಮಿ ಅವರು ಮೈಲಾಡುತುರೈಗೆ ಬಂದಾಗ ಸೂರ್ಯ ಅವರನ್ನು ಒದೆಯುವವರಿಗೆ ನಗದು ಬಹುಮಾನವನ್ನು ಘೋಷಿಸಿದ್ದರು.

ಸೂರ್ಯ ಅಭಿನಯದ ಜೈ ಭೀಮ್ ಚಿತ್ರವನ್ನು ಟಿ.ಜೆ. ಜ್ಞಾನವೇಲ್ ಮತ್ತು ಸ್ವತಃ ನಟ ಮತ್ತು ಅವರ ಪತ್ನಿ ಜ್ಯೋತಿಕಾ ನಿರ್ಮಿಸಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋ OTT ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್