ಸಂಗ್ರಹ ಚಿತ್ರ 
ದೇಶ

PUBG ಗೇಮ್ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತ ಹುಡುಗರ ಮೇಲೆ ಹರಿದ ರೈಲು: ಬಾಲಕರಿಬ್ಬರ ದುರ್ಮರಣ

ಪಬ್‍ಜಿ ಗೇಮ್ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತಿದ್ದ ಬಾಲಕರ ಮೇಲೆ ರೈಲು ಹರಿದಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. 

ಮಥುರಾ: ಪಬ್‍ಜಿ ಗೇಮ್ ಆಡುತ್ತಾ ರೈಲ್ವೆ ಹಳಿ ಮೇಲೆ ಕುಳಿತಿದ್ದ ಬಾಲಕರ ಮೇಲೆ ರೈಲು ಹರಿದಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. 

ಲಕ್ಷ್ಮೀನಗರ ಪ್ರದೇಶದಲ್ಲಿ ಘಟನೆ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿಗಳಾದ 18 ವರ್ಷದ ಕಪಿಲ್ ಮತ್ತು 16 ವರ್ಷದ ರಾಹುಲ್ ಇಬ್ಬರೂ ಬೆಳಿಗ್ಗೆ ವಾಕಿಂಗ್‌ಗೆ ಹೋಗಿದ್ದರು. ತದ ನಂತರ ಅವರು ತಮ್ಮ ಮೊಬೈಲ್‌ನಲ್ಲಿ ಗೇಮ್ ಆಡುವುದರಲ್ಲಿ ತೊಡಗಿದ್ದರು ಎಂದು ಜಮುನಾ ಪಾರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ತಿಳಿಸಿದ್ದಾರೆ.

ಮಥುರಾ ಕಂಟೋನ್ಮೆಂಟ್ ಮತ್ತು ರಾಯಾ ನಿಲ್ದಾಣಗಳ ನಡುವಿನ ಅಪಘಾತ ಸ್ಥಳದಲ್ಲಿ ಎರಡೂ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಒಂದು ಹಾನಿಗೊಳಗಾಗಿದ್ದರೆ, ಮತ್ತೊಂದರಲ್ಲಿ ಆಟ ನಡೆಯುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇಬ್ಬರು ಬಾಲಕರ ಮೇಲೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿಲ್ಲ ಎಂದು ಮಥುರಾ ಕಂಟೋನ್ಮೆಂಟ್ ಜಿಆರ್‌ಪಿ ಇನ್‌ಸ್ಪೆಕ್ಟರ್ ಡಿ ಕೆ ದ್ವಿವೇದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಾಕಿಸ್ತಾನದಂತೆ ಭಾರತ 'ಬ್ರೋಕರ್ ದೇಶವಲ್ಲ': ಸರ್ವ ಪಕ್ಷ ಸಭೆಯಲ್ಲಿ ಜೈಶಂಕರ್ ಲೇವಡಿ!

West Asia conflict: ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇಂಧನ ಭದ್ರತೆ ಸ್ಥಿರವಾಗಿದೆ- ಕೇಂದ್ರ ಸರ್ಕಾರ

IPL 2026: ಮಾ. 28ಕ್ಕೆ ಆರ್ ಸಿಬಿ vs ಸನ್ ರೈಸರ್ಸ್ ಹೈದರಾಬಾದ್ ಪಂದ್ಯ, ಮೆಟ್ರೋದಲ್ಲಿ ಫ್ರೀ ರೈಡ್, ಸಂಚಾರ ಅವಧಿ ವಿಸ್ತರಣೆ!

101 ಕ್ಷಿಪಣಿ ದಾಳಿ ಬೆನ್ನಲ್ಲೇ USS ಅಬ್ರಹಾಂ ಲಿಂಕನ್ ಪಲಾಯನ; ನಮ್ಮ ವ್ಯಾಪ್ತಿಯೊಳಗೆ ಬಂದರೆ, ನಾಶ ಮಾಡ್ತೀವೀ: ಇರಾನ್ ಎಚ್ಚರಿಕೆ!

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ: ವದಂತಿಗಳಿಗೆ ಕಿವಿಗೂಡಬೇಡಿ, ಜನರಿಗೆ ರಾಜ್ಯ ಸರ್ಕಾರದ ಮನವಿ!

SCROLL FOR NEXT