ದೇಶ

ರಾಜಸ್ಥಾನ ನೂತನ ಸಂಪುಟದಲ್ಲಿ 12 ಹೊಸ ಮುಖಗಳು, ಸಚಿನ್ ಪೈಲಟ್ ಬಣದಿಂದ ಐವರು ಸಚಿವರಾಗುವ ಸಾಧ್ಯತೆ

Nagaraja AB

ನವದೆಹಲಿ: ರಾಜಸ್ಥಾನ ಸಚಿವ ಸಂಪುಟ ಇಂದು ಪುನಾರಚನೆಯಾಗಲಿದ್ದು, ಸಚಿನ್ ಪೈಲಟ್ ಬಣದಿಂದ ಐವರು ಸೇರಿದಂತೆ 12 ಹೊಸ ಮುಖಗಳು ನೂತನ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.

ರಾಜಸ್ಥಾನ ಸಂಪುಟದ ಎಲ್ಲಾ ಸಚಿವರು ರಾಜೀನಾಮೆ ನೀಡಿದ ನಂತರ ಸಂಪುಟ ಸಚಿವರಾದ ರಘು ಶರ್ಮಾ, ಹರೀಶ್ ಚೌಧರಿ ಮತ್ತು ಗೋವಿಂದ್ ಸಿಂಗ್ ದೋತಾಸ್ರ ಅವರನ್ನು ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ವೀಕರಿಸಿರುವುದಾಗಿ ತಿಳಿದುಬಂದಿದೆ. 

ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಹಿಂದೆ ರಾಜೀನಾಮೆ ನೀಡಿದ 18 ಸೇರಿದಂತೆ ಒಟ್ಟು 30 ಸಚಿವರನ್ನು ಹೊಂದಲಿದೆ.  ರಾಜ್ಯದ ಮೂವರು ಸಚಿವರನ್ನು ಸಂಪುಟ ದರ್ಜೆಗೆ ಏರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೂತನ ಸಂಪುಟದಲ್ಲಿ ಮೂವರು ಮಹಿಳೆಯರು, ಮುಸ್ಲಿಂರು ಸೇರಿದಂತೆ  ಪರಿಶಿಷ್ಟ ಜಾತಿಯಿಂದ ನಾಲ್ವರು ಹಾಗೂ ಪರಿಶಿಷ್ಟ ಪಂಗಡದಿಂದ ಮೂವರು ಸಚಿವರಾಗಲಿದ್ದಾರೆ.

ಹೆಮರಾಮ್ ಚೌಧರಿ, ಮಹೇಂದ್ರ ಜಿತ್ ಸಿಂಗ್ ಮಾಳವಿಯಾ, ರಾಮ್ ಲಾಲ್ ಜಾಟ್, ಮಹೇಶ್ ಜೋಶಿ ಮತ್ತಿತರರು ಸಂಪುಟ ದರ್ಜೆ ಸಚಿವರಾಗಿ ಹಾಗೂ ಬ್ರಿಜೇಂದ್ರ ಸಿಂಗ್ ಒಲಾ, ರಾಜೇಂದ್ರ ದುರ್ಹಾ ಮತ್ತಿತರರು ರಾಜ್ಯ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

SCROLL FOR NEXT