ಕೋವ್ಯಾಕ್ಸಿನ್ 
ದೇಶ

ರೋಗಲಕ್ಷಣದ ಸಹಿತ ಕೋವಿಡ್ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಶೇ.50 ರಷ್ಟು ಪರಿಣಾಮಕಾರಿ

ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಯಾಗಿರುವ ಕೋವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಗಳು ಶೇ.50 ರಷ್ಟು ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ. 

ನವದೆಹಲಿ: ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಯಾಗಿರುವ ಕೋವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಗಳು ಶೇ.50 ರಷ್ಟು ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ. 

ಮೊದಲ ರಿಯಲ್ ವರ್ಲ್ಡ್ ಮೌಲ್ಯಮಾಪನದಲ್ಲಿ ಈ ಅಂಕಿ-ಅಂಶಗಳು ಬಹಿರಂಗವಾಗಿದ್ದು, ಈ ಲಸಿಕೆ ರೋಗಲಕ್ಷಣ ಸಹಿತ ಕೊರೋನಾ ಸೋಂಕಿನ ವಿರುದ್ಧ ಶೇ.77.8 ಪರಿಣಾಮಕಾರಿತ್ವ (ದಕ್ಷತೆ)ಯನ್ನು ಹೊಂದಿದೆ, ಸುರಕ್ಷತೆಯ ಆತಂಕ ಇಲ್ಲ ಎಂದು ವರದಿ ಹೇಳಿದೆ. 

ಏ.15-ಮೇ 15 ವರೆಗೆ ರೋಗಲಕ್ಷಣಗಳನ್ನು ಹೊಂದಿ, ಕೋವಿಡ್-19 ಸೋಂಕು ಪತ್ತೆ ಪರೀಕ್ಷೆಗಾಗಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದ  ದೆಹಲಿಯ ಏಮ್ಸ್ ನ 2,714 ಸಿಬ್ಬಂದಿಗಳನ್ನು ಲಸಿಕೆಗೆ ಸಂಬಂಧಿಸಿದಂತೆ ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು.
 
ಈ ಅಧ್ಯಯನ ನಡೆದ ಅವಧಿಯಲ್ಲಿ ಭಾರತದಲ್ಲಿ ವರದಿಯಾಗುತ್ತಿದ್ದ ಶೇ.80 ರಷ್ಟು ಪ್ರಕರಣಗಳು ಡೆಲ್ಟಾ ರೂಪಾಂತರಿಯಾಗಿ ಪ್ರಬಲವಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ. 

ಹೈದರಾಬಾದ್ ಮೂಲದ ಸಂಸ್ಥೆ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ನ್ನು ಅಭಿವೃದ್ಧಿಪಡಿಸಿದ್ದು, ಜಾಗತಿಕ ಮಟ್ಟದಲ್ಲಿ ತುರ್ತು ಬಳಕೆಯ ಅನುಮೋದನೆಗೆ ಸಿದ್ಧಗೊಂಡಿದೆ. ವಿಶ್ವಸಂಸ್ಥೆ ತುರ್ತು ಬಳಕೆಗೆ ಈ ತಿಂಗಳಲ್ಲಿ ಅನುಮೋದನೆ ನೀಡಿತ್ತು.

ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ನಂತರದ 28 ದಿನಗಳಲ್ಲಿ ಎರಡನೇ ಡೋಸ್ ನ್ನು ನೀಡಬೇಕಾಗುತ್ತದೆ. ಭಾರತದಲ್ಲಿ 18 ವರ್ಷದ ಮೇಲ್ಪಟ್ಟ ವ್ಯಕ್ತಿಗಳಿಗೆ  ಕೋವ್ಯಾಕ್ಸಿನ್ ನೀಡುವುದಕ್ಕೆ 2021 ರ ಜನವರಿಯಲ್ಲಿ ಅನುಮತಿ ನೀಡಲಾಗಿತ್ತು. ಇತ್ತೀಚಿನ ಅಧ್ಯಯನವನ್ನು ಭಾರತದಲ್ಲಿ ಕೋವಿಡ್-19 ನ ಎರಡನೇ ಅಲೆಯ ಅವಧಿಯಲ್ಲಿ ನಡೆಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT