ದೇಶ

ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ: ತೆಲಂಗಾಣ ಫಸ್ಟ್, ಕರ್ನಾಟಕಕ್ಕೆ ಮೂರನೇ ಸ್ಥಾನ

Nagaraja AB

ನವದೆಹಲಿ: ಇತ್ತೀಚೆಗೆ ಬಂದ ವರದಿಯೊಂದು ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ  ಹೆಚ್ಚಾಗಿದೆ ಎಂದು ಹೇಳಿತ್ತು. ಆದ್ರೆ ಈ ಖುಷಿ ವಿಷಯದ ನಡುವೆಯೇ ಮತ್ತೊಂದು ವರದಿ ಬಂದಿದ್ದು, ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗಿದೆ ಎಂದಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ, ಪತಿಯು ತನ್ನ ಹೆಂಡತಿಯ ಮೇಲೆ ಹಲ್ಲೆ ಅಥವಾ ಹೊಡೆಯುವುದನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ ? ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ 18 ರಾಜ್ಯಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಿಂದ ಕೂಡ ಪ್ರತಿಕ್ರಿಯೆಗಳು ಬಂದಿವೆ.

ಸಮೀಕ್ಷೆಗೆ ಒಳಗಾದ ಮಹಿಳೆಯರಲ್ಲಿ ತೆಲಂಗಾಣದ ಶೇ.83.8ರಷ್ಟು ಮಹಿಳೆಯರು ಪತಿ ತಮ್ಮ ಮೇಲೆ ಹಲ್ಲೆ ಮಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯದಲ್ಲಿ ಈ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಹಿಮಾಚಲ ಪ್ರದೇಶವು ಶೇ. 14.8ರಷ್ಟು ಇದ್ದು,ಕೊನೆಯ ಸ್ಥಾನದಲ್ಲಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಆಂಧ್ರ ಪ್ರದೇಶದಲ್ಲಿ ಶೇ. 83. 6, ಕರ್ನಾಟಕದಲ್ಲಿ ಶೇ. 76. 9 ಮಣಿಪುರದಲ್ಲಿ ಶೇ. 65. 9 ಮತ್ತು ಕೇರಳದಲ್ಲಿ ಶೇ. 52. 4 ರಷ್ಟು ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಯುತ್ತಿರುವುದಾಗಿ ಸಮೀಕ್ಷೆ ಹೇಳಿದೆ.

ಮನೆ ಅಥವಾ ಮಕ್ಕಳನ್ನು ನಿರ್ಲಕ್ಷ್ಯ, ಪತಿಯೊಂದಿಗೆ ವಾಗ್ವಾದ, ಅಥವಾ ಆತನೊಂದಿಗೆ ಲೈಂಗಿಕತೆಗೆ ನಿರಾಕರಿಸಿದಾಗ, ಸರಿಯಾಗಿ ಅಡುಗೆ ಮಾಡದಿದ್ದಾಗ, ಪತ್ನಿ ಸರಿಯಾಗಿ ನನಗೆ ಗೌರವ ಕೊಡುತ್ತಿಲ್ಲ ಎಂಬ ಸಂಶಯ ಪತಿಯಲ್ಲಿದ್ದಾಗ ಮತ್ತಿತರ ಕಾರಣಗಳೊಂದಿಗೆ ಸರ್ವೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. 

SCROLL FOR NEXT