ದೇಶ

ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲಾ ಉಗ್ರರನ್ನು ಹೊಡೆದುರುಳಿಸಲಾಗಿದೆ: ಮೂಲಗಳು

Lingaraj Badiger

ನವದೆಹಲಿ: ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಬಹುತೇಕ ಎಲ್ಲಾ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ಭಾನುವಾರ ತಿಳಿಸಿವೆ.

ಸಶಸ್ತ್ರ ಪಡೆಗಳು ಈಗ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಎದುರಿಸಲು ಸಣ್ಣ ತಂಡಗಳನ್ನು ಒಳಗೊಂಡಿರುವ ಗುಪ್ತಚರ ಮಾಹಿತಿ ಆಧಾರಿತ "ಸರ್ಜಿಕಲ್ ಕಾರ್ಯಾಚರಣೆಗಳ" ಮೇಲೆ ನಿಗಾ ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ನಾಗರಿಕ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಗುಪ್ತಚರ ಸಂಸ್ಥೆಗಳು ಮತ್ತು ಸೇನೆಯ ನಡುವೆ ಉತ್ತಮ ಸಮನ್ವಯದ ಜೊತೆಗೆ, ಸೂಕ್ಷ್ಮ ಚೌಕಟ್ಟಿನ ಅಡಿಯಲ್ಲಿ ಭಯೋತ್ಪಾದನೆಯನ್ನು ಎದುರಿಸಲು "ಪರಿಷ್ಕರಿಸಿದ" ವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರವು ಕಳೆದ ತಿಂಗಳು ಹಲವು ಮುಗ್ಧ ನಾಗರಿಕರ ಹತ್ಯೆಗಳಿಗೆ ಸಾಕ್ಷಿಯಾಯಿತು, ಈ ಪ್ರದೇಶದಲ್ಲಿ ಹಿಂಸಾಚಾರ ಮತ್ತು ಪ್ರಕ್ಷುಬ್ಧತೆಯ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಅವರು ತಿಳಿಸಿದ್ದಾರೆ.

ಭಯೋತ್ಪಾದನಾ-ನಿಗ್ರಹ ಡ್ರಿಲ್‌ನ ಪ್ರಮುಖ ಗುರಿ ಕಣಿವೆಯಲ್ಲಿ ಯಾವುದೇ ಅಮಾಯಕರು ಉಗ್ರರಿಂದ ಜೀವ ಕಳೆದುಕೊಳ್ಳಬಾರದು ಮತ್ತು ಭದ್ರತಾ ಪಡೆಗಳ ಎಲ್ಲಾ ವಿಭಾಗಗಳು ಅದನ್ನು ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT