ರೈತರ ಪ್ರತಿಭಟನೆ 
ದೇಶ

ಇಡೀ ನಗರ ಸುತ್ತುವರೆದಿದ್ದೀರಿ, ಈಗ ನೀವು ಒಳಗೆ ಬಂದು ಪ್ರತಿಭಟಿಸಲು ಬಯಸುತ್ತೀರಿ: ರೈತರ ಪ್ರತಿಭಟನೆಗೆ ಸುಪ್ರೀಂ ಆಕ್ರೋಶ

"ನೀವು ಇಡೀ ನಗರವನ್ನು ಸುತ್ತುವರೆದು ಉಸಿರುಗಟ್ಟುವಂತೆ ಮಾಡಿದ್ದೀರಿ. ಈಗ ನೀವು ಒಳಗೆ ಬಂದು ಮತ್ತೆ ಇಲ್ಲಿ ಪ್ರತಿಭಟನೆ ಆರಂಭಿಸಲು ಬಯಸುತ್ತೀರಿ. ಆದರೆ ಈ ಕುರಿತು ಸಮತೋಲನದ ನಿರ್ಧಾರ ಅಗತ್ಯ"...

ನವದೆಹಲಿ: "ನೀವು ಇಡೀ ನಗರವನ್ನು ಸುತ್ತುವರೆದು ಉಸಿರುಗಟ್ಟುವಂತೆ ಮಾಡಿದ್ದೀರಿ. ಈಗ ನೀವು ಒಳಗೆ ಬಂದು ಮತ್ತೆ ಇಲ್ಲಿ ಪ್ರತಿಭಟನೆ ಆರಂಭಿಸಲು ಬಯಸುತ್ತೀರಿ. ಆದರೆ ಈ ಕುರಿತು ಸಮತೋಲನದ ನಿರ್ಧಾರ ಅಗತ್ಯ" ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳಿಗೆ ತಿಳಿಸಿದೆ.

ದೆಹಲಿ ಜಂತರ್ ಮಂತರ್‌ನಲ್ಲಿ 'ಸತ್ಯಾಗ್ರಹ' ನಡೆಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕಿಸಾನ್ ಮಹಾಪಂಚಾಯತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ನೇತೃತ್ವದ ಪೀಠ, ಒಮ್ಮೆ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ನಂತರವೂ ಪ್ರತಿಭಟನೆ ಮುಂದುವರಿಸುವುದರ ಅರ್ಥವೇನು? ಎಂದು ರೈತ ಸಂಘಟನೆಯನ್ನು ಪ್ರಶ್ನಿಸಿತು.

ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕು ಇರುವಂತೆ ನಾಗರಿಕರು ಸಹ ಮುಕ್ತವಾಗಿ ಮತ್ತು ಭಯವಿಲ್ಲದೆ ಸಂಚರಿಸುವ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಈ ಬಗ್ಗೆ ಸಮತೋಲನದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.

ನಿಮ್ಮ ಪ್ರತಿಭಟನೆಯಿಂದ ನಮಗೆ ಯಾವುದೇ ತೊಂದರೆ ಇಲ್ಲ. ನಾವು "ಸಂತೋಷವಾಗಿದ್ದೇವೆ" ಎಂದು ಈ ಪ್ರದೇಶದ ನಿವಾಸಿಗಳಿಂದ ಅನುಮತಿ ಪಡೆಯುತ್ತಾರೆಯೇ? ಎಂದು ಕೋರ್ಟ್ ರೈತ ಸಂಘಟನೆಯ ಪರ ವಕೀಲರನ್ನು ಪ್ರಶ್ನಿಸಿತು ಮತ್ತು ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ.

ರೈತರು ಮತ್ತು ಕೃಷಿಕರ ಸಂಘಟನೆಯಾದ 'ಕಿಸಾನ್ ಮಹಾಪಂಚಾಯತ್' ಮತ್ತು ಅದರ ಅಧ್ಯಕ್ಷರು ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲು ಕನಿಷ್ಠ 200 ರೈತರು ಅಥವಾ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ನೀಡುವಂತೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT