ದೇಶ

ಉತ್ತರಾಖಂಡ, ಲಡಾಖ್‌ನಲ್ಲಿ ಚೀನಾ ಆಕ್ರಮಣ: 56 ಇಂಚಿನ ಎದೆ ಎಲ್ಲಿ ಅಡಗಿದೆ ಎಂದು ರಾಹುಲ್ ಕಿಡಿ

Vishwanath S

ನವದೆಹಲಿ: ಲಡಾಖ್ ಮತ್ತು ಉತ್ತರಾಖಂಡದಲ್ಲಿ ಚೀನಾದ ಆಕ್ರಮಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

2014ರ ಲೋಕಸಭಾ ಚುನಾವಣೆಗೆ ಮುನ್ನ ರ್ಯಾಲಿಗಳಲ್ಲಿ ಮಾಡಿದ 56 ಇಂಚಿನ ಎದೆಯ ಹೇಳಿಕೆಯನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು.

"ಚೀನಾ ಮತ್ತು ಪಾಕಿಸ್ತಾನ ಜೊತೆಗೆ 'ಶ್ರೀ 56 ಇಂಚು' ಭಾರತದ ಭೂಮಿಯಲ್ಲಿ ಚೀನಾದ ಆಕ್ರಮಣವನ್ನು ಹೆಚ್ಚಿಸುವುದಕ್ಕೆ ಸಮಾನವಾಗಿದೆ" ಎಂದು ಅವರು ಲಡಾಖ್ ಮತ್ತು ಉತ್ತರಾಖಂಡವನ್ನು ಉಲ್ಲೇಖಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 30ರಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ)ಯ ಸುಮಾರು 100ಕ್ಕೂ ಸೈನಿಕರು ಉತ್ತರಾಖಂಡದ ಬಾರಹೋಟಿ ಸೆಕ್ಟರ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು(ಎಲ್‌ಎಸಿ) ಉಲ್ಲಂಘಿಸಿದ್ದಾರೆ. ಕೆಲವು ಗಂಟೆಗಳ ಕಾಲ ಕಳೆದ ನಂತರ ಚೀನಾದ ಸೈನಿಕರು ಈ ಪ್ರದೇಶದಿಂದ ಮರಳಿದರು ಎಂದು ಸ್ಥಳೀಯರು ಹೇಳಿದ್ದಾರೆ. ಚೀನಾದ ಅತಿಕ್ರಮಣದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ ಎಂದು ಕಿಡಿಕಾರಿದರು.

ಪೂರ್ವ ಲಡಾಖ್‌ನ ಹಲವಾರು ಪ್ರದೇಶಗಳಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಮುಂದುವರಿದ ಸಂಘರ್ಷದ ನಡುವೆ ಈ ಘಟನೆ ಸಂಭವಿಸಿದೆ. ಆದರೂ ಎರಡೂ ಕಡೆಯವರು ಎರಡು ಸೂಕ್ಷ್ಮ ಸ್ಥಳಗಳಲ್ಲಿ ನಿರ್ಲಿಪ್ತತೆಯನ್ನು ಪೂರ್ಣಗೊಳಿಸಿದ್ದಾರೆ.

ಚೀನಾದ ಭಾಗವು ಈ ವಲಯದಲ್ಲಿನ ಎಲ್‌ಎಸಿ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇನ್ನು ಪೂರ್ವ ಲಡಾಖ್ ಬಿಕ್ಕಟ್ಟಿನ ನಂತರ ಭಾರತವು ಸುಮಾರು 3,500-ಕಿಮೀ ಎಲ್ಎಸಿ ಉದ್ದಕ್ಕೂ ಕಟ್ಟುನಿಟ್ಟಿನ ನಿಗಾ ವಹಿಸುತ್ತಿದೆ.

ಕಳೆದ ವರ್ಷ ಮೇ 5ರಂದು ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನಾಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ  ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ.

SCROLL FOR NEXT