ಆರ್ಯನ್ ಖಾನ್ ನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುತ್ತಿರುವ ಅಧಿಕಾರಿಗಳು 
ದೇಶ

ಡಿ-ಕಂಪನಿ ಡ್ರಗ್ ಗಳಿಗೆ ಬಾಲಿವುಡ್ ತಾರೆಯರೇ ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರು!

ಮುಂಬೈ ನ ಡ್ರಗ್ ಚಟುವಟಿಗಳಿಗೆ ಆಧಾರವಾಗಿರುವುದು ಡಿ-ಕಂಪನಿ ಎಂಬುದು ರಹಸ್ಯವಾಗೇನು ಉಳಿದಿಲ್ಲ ಹಾಗೂ ಬಾಲಿವುಡ್ ನ ಅನೇಕ ತಾರೆಗಳು ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರಾಗಿದ್ದಾರೆ. 

ಮುಂಬೈ: ಮುಂಬೈ ನ ಡ್ರಗ್ ಚಟುವಟಿಗಳಿಗೆ ಆಧಾರವಾಗಿರುವುದು ಡಿ-ಕಂಪನಿ ಎಂಬುದು ರಹಸ್ಯವಾಗೇನು ಉಳಿದಿಲ್ಲ ಹಾಗೂ ಬಾಲಿವುಡ್ ನ ಅನೇಕ ತಾರೆಗಳು ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರಾಗಿದ್ದಾರೆ. ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ನೇತೃತ್ವದ್ದಾಗಿದ್ದು, ಪಾಕಿಸ್ತಾನದಲ್ಲಿ ಈ ಉದ್ಯಮದ ಕೇಂದ್ರವಿದೆ ಎಂದು ಹೇಳಲಾಗಿದೆ. 

ಡಿ ಕಂಪನಿ ಕಚ್ಚಾ ಡ್ರಗ್ಸ್- ಓಪಿಯಮ್, ಕೋಕಾಗಳನ್ನು ಅಫ್ಘಾನಿಸ್ತಾನ ಹಾಗೂ ಕಾಂಬೋಡಿಯಾದಿಂದ ಖರೀದಿಸಿ ಅದನ್ನ ಹೆರಾಯಿನ್, ಬ್ರೌನ್ ಶುಗರ್, ಚರಾಸ್ ಹಾಗೂ ಕೊಕೇನ್ ಗಳನ್ನಾಗಿ ಸಂಸ್ಕರಿಸಿ ಅದನ್ನು ಭಾರತಕ್ಕೆ ಪಂಜಾಬ್ ಗಡಿ ಹಾಗೂ ಗುಜರಾತ್ ಬಂದರಿನ ಮೂಲಕ ಮುಂಬೈ ಗೆ ತಲುಪಿಸುವ ಕೆಲಸ ಮಾಡುತ್ತದೆ ಎಂದು ಎ ಎನ್ ಸಿಯ  ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

ಮುಂಬೈ ಗೆ ಡ್ರಗ್ಸ್ ಬಂದ ತಕ್ಷಣ ಅಲ್ಲಿಂದ ಮುಖ್ಯ ಡೀಲರ್ ಗಳಿಗೆ ತಲುಪಿಸಲಿದ್ದಾರೆ, ಸಬ್ ಡೀಲರ್ ಡೀಲರ್ ಹಾಗೂ ಇತರ ಸ್ಥಳೀಯ ಪೂರೈಕೆದಾರರಿಂದ ಜನರ ಕೈಗೆ ತಲುಪಲಿದೆ

ಕಾಲೇಜು ವಿದ್ಯಾರ್ಥಿಗಳು ಬಹುತೇಕ ಗಾಂಜಾ ಹಾಗೂ ಚರಾಸ್ ಗಳನ್ನು ತೆಗೆದುಕೊಳ್ಳುತ್ತಾರೆ. ಹೆರಾಯಿನ್ ಹಾಗೂ ಕೊಕೇನ್ ನ್ನು ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಶ್ರೀಮಂತರು ಮಾತ್ರ ಇವುಗಳನ್ನು ಖರೀದಿಸುತ್ತಾರೆ. ಬಾಲಿವುಡ್ ನಲ್ಲಿ ಡ್ರಗ್ಸ್ ಸೇವಿಸುವ ಬಹುತೇಕ ಮಂದಿ ಹೆರಾಯಿನ್ ಅಥವಾ ಕೊಕೇನ್ ನ್ನು ಖರೀದಿಸುತ್ತಾರೆ ಎನ್ನುತ್ತಾರೆ ಎಎನ್ ಸಿಯ ಅಧಿಕಾರಿ.

ಎಂಡಿಎಂಎ ಲೈಂಗಿಕ ಉತ್ಸಾಹದ ಮೇಲಿನ ಅದರ ಪರಿಣಾಮಗಳಿಂದಾಗಿ ಹೆಚ್ಚಿನ ಬೇಡಿಕೆ ಹೊಂದಿದೆ ಎಂದು ನ್ಯಾಕ್ರೋಟಿಕ್ಸ್ ನಿಗ್ರಹ ಸೆಲ್ ನ ಉನ್ನತ ಮೂಲಗಳು ತಿಳಿಸಿವೆ. ಈ ಎಂಡಿಎಂಎ ನಿಂದ ಸ್ಲಿಮ್ ಹಾಗೂ ಫಿಟ್ ಆಗಿರುವುದು ಸಾಧ್ಯವಾದ್ದರಿಂದ ಬಾಲಿವುಡ್ ನ ಮಹಿಳಾ ಕಲಾವಿದರು ಗಳು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುತ್ತಿವೆ ನ್ಯಾಕ್ರೋಟಿಕ್ಸ್ ನಿಗ್ರಹ ಸೆಲ್ ನ ಉನ್ನತ ಮೂಲಗಳು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ