ದೇಶ

ಲಖೀಂಪುರ ರೈತರ ಹತ್ಯೆ ಪ್ರಕರಣ: ಎರಡನೇ ಮರಣೋತ್ತರ ಪರೀಕ್ಷೆ ನಂತರ ಮೃತ ರೈತನ ಶವಸಂಸ್ಕಾರ

Harshavardhan M

ಲಕ್ನೋ: ದೇಶದ ಗಮನವನ್ನು ಸೆಳೆದಿರುವ ಲಖೀಂಪುರ ರೈತರ ಹತ್ಯೆ ಪ್ರಕರಣದಲ್ಲಿ ಮೃತಪಟ್ಟಿದ್ದ ರೈತ ಗುರುವಿಂದರ್ ಸಿಂಗ್ ಅಂತ್ಯಸಂಸ್ಕಾರವನ್ನು ಕಡೆಗೂ ಬುಧವಾರ ಮುಂಜಾನೆ ನೆರವೇರಿಸಲಾಗಿದೆ. ಅದಕ್ಕೂ ಮುನ್ನ ಮೃತರ ಕುಟುಂಬಸ್ಥರು ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದರು.

ಮೊದಲ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲವು ಮಾಹಿತಿಗಳನ್ನು ನಮೂದಿಸಲಾಗಿಲ್ಲ. ಮೃತರ ದೇಹದಲ್ಲಿ ಗುಂಡು ಹಾರಿಸಿರುವ ಗುರುತುಗಳಿವೆ. ಈ ಬಗ್ಗೆ ಮರಣೋತ್ತರ ವರದಿಯಲ್ಲಿ ಉಲ್ಲೇಖವಿಲ್ಲ. ಎಂದು ಅವರು ದೂರಿದ್ದರು. ರೈತ ಮುಖಂಡರಾದ ರಾಕೇಶ್ ಟಿಕಾಯಿತ್ ಕುಟುಂಬಸ್ಥರ ಬೆಂಬಲಕ್ಕೆ ನಿಂತಿದ್ದರು. 

ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡುವವರೆಗೆ ಶವಸಂಸ್ಕಾರ ಮಾಡುವುದಿಲ್ಲವೆಂದು ಕುಟುಂಬಸ್ಥರು ಹಠ ಹಿಡಿದಿದ್ದರಿಂದ ನಂತರ ಅನುಮತಿ ನೀಡಲಾಗಿತ್ತು. ಎರಡನೇ ಮರಣೋತ್ತರ ಪರೀಕ್ಷೆಯನ್ನು ಸಂಪೂರ್ಣ ವಿಡಿಯೊ ರೆಕಾರ್ಡಿಂಗ್ ಮಾಡಲಾಗಿದೆ. 

ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತ ರೈತನ ಶವಸಂಸ್ಕಾರವನ್ನು ನಡೆಸಲಾಗಿದೆ. ಘಟನೆಯಲ್ಲಿ ಮೃತಪಟ್ಟಿದ್ದ ಉಳಿದ ಮೂವರು ರೈತರ ಶವಸಂಸ್ಕಾರವನ್ನು ಮಂಗಳವಾರವೇ ಮಾಡಲಾಗಿತ್ತು. 

SCROLL FOR NEXT