ದೇಶ

ವೈದ್ಯಕೀಯ ನೊಬೆಲ್ ವಿಜೇತನ ಸಂಶೋಧನೆಗೆ ಭಾರತ ಸರ್ಕಾರದ ಪ್ರಯೋಗಾಲಯ ಸಹಾಕಾರಿ!?

Srinivas Rao BV

ನವದೆಹಲಿ: ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ. ಈ ವೈಜ್ಞಾನಿಕ ಮಹತ್ವವನ್ನು ಸ್ಥಾಪಿಸುವುದಕ್ಕೆ ಅವರಿಗೆ ಈ ಹಿಂದೆ ಭಾರತ ಸರ್ಕಾರದ  ಪ್ರಯೋಗಾಲಯದಲ್ಲಿನ ಪ್ರಯೋಗಗಳೂ ನೆರವಾಗಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ. 

ಸಿಎಸ್ಐಆರ್ ನೇತೃತ್ವದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿ (ಐಐಸಿಬಿ) 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.

ಪೀಜೋ ಚಾನೆಲ್‌ಗಳನ್ನು ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ಪತ್ತೆ ಮಾಡಿದ್ದು ಇದು 2010 ಕ್ಕಿಂತಲೂ ಮುಂಚೆ ತಿಳಿಯದ ಜೀವಶಾಸ್ತ್ರದ ಸಾಮಾನ್ಯ ವಾಸ್ತವ ಅಂಶವಾಗಿದ್ದು 2010 ಕ್ಕಿಂತಲೂ ಮುನ್ನ ನರಮಂಡಲದ ವ್ಯವಸ್ಥೆಯಲ್ಲಿ ಈ ರಿಸೆಪ್ಟರ್ ಗಳ ಇನ್ನಷ್ಟು ಪಾತ್ರವನ್ನು ಅರಿಯುವುದಕ್ಕಾಗಿ ಹಲವಾರು ಸಂಶೋಧನೆಗಳು ನಡೆದಿವೆ. ಈ ಪೈಕಿ ಭಾರತದ್ದೂ ಸಂಶೋಧನೆ 
 
ಉದಾಹರಣೆಗೆ 2014 ರಲ್ಲಿ ಯೂನಿವರ್ಸಿಟಿ ಆಫ್ ಲೀಡ್ಸ್ ನಲ್ಲಿ ಡೇವಿಡ್ ಬೀಚೆಸ್ ಲ್ಯಾಬ್, ರಕ್ತದೊತ್ತಡದಲ್ಲಿನ ಬದಲಾವಣೆಗಳನ್ನು ಅರಿಯುವುದಕ್ಕೆ ಹೃದಯರಕ್ತನಾಳದ ವ್ಯವಸ್ಥೆಯಲ್ಲಿ ಈ ಚಾನಲ್ ಗಳು ಬಹಳ ಮುಖ್ಯಪಾತ್ರ ವಹಿಸುವ ಮೂಲಕ ಒತ್ತಡ ಸಂವೇದಕಗಳಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. 

ನಮ್ಮ ಕೀಲುಗಳ ಕಾರ್ಟಿಲೆಜ್ ಗಳಲ್ಲಿನ ಒತ್ತಡದ ಸಂವೇದಿಯಾಗಿಯೂ ಈ ಚಾನಲ್ ಗಳು ಕಾರ್ಯನಿರ್ವಹಣೆ ಮಾಡುವುದನ್ನು 2014 ರಲ್ಲಿ ಡ್ಯೂಕ್ ವಿವಿಯಲ್ಲಿ ವುಲ್ಫ್‌ಗ್ಯಾಂಗ್ ಲೈಡ್‌ಕೆ ಗ್ರೂಪ್ ತೋರಿಸಿತ್ತು. 

ಭಾರತದಲ್ಲಿ ದೀಪ್ಯಮಾನ್ ಗಂಗೂಲಿ ನೇತೃತ್ವದ ಐಐಸಿಬಿ ವಿಜ್ಞಾನಿಗಳು 2018 ರಲ್ಲಿ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆ ದೈಹಿಕ ಸೂಚನೆಗಳನ್ನು ಪಡೆಯುವುದಕ್ಕೆ ಈ ರಿಸೆಪ್ಟರ್ ಗಳ ಮೇಲೆ ಅವಲಂಬಿತವಾಗಿರುತ್ತವೆ ಎಂಬ ಅಂಶವನ್ನು ತೋರಿಸಿತ್ತು.
 

SCROLL FOR NEXT