ದೇಶ

ಅಲ್ಪಸಂಖ್ಯಾತರ ಮೇಲೆ ದಾಳಿ; ಭಯದಿಂದ ಕಣಿವೆ ರಾಜ್ಯ ತೊರೆಯುತ್ತಿರುವ ಕೆಲ ಕಾಶ್ಮೀರಿ ಪಂಡಿತರು

Nagaraja AB

ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆಗೆ ಗುರಿ ಇಡಲಾಗಿದೆ ಎಂಬ ಅನುಮಾನದಿಂದ  2010-11ರ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಕೆಲಸ ಪಡೆದಿರುವ  ಸಮುದಾಯದ ಕೆಲವು ನೌಕರರು, ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದು, ತಮ್ಮ ಜೀವ ಭಯದಿಂದ ನಿಧಾನವಾಗಿ ಜಮ್ಮುವನ್ನು ತೊರೆಯಲು ಆರಂಭಿಸಿದ್ದಾರೆ ಎಂದು ಕಾಶ್ಮೀರಿ ಪಂಡಿತ್ ಸಂಘಟನೆಯೊಂದು ಶುಕ್ರವಾರ ಹೇಳಿದೆ.

ಈ ಮಧ್ಯೆ ಆಡಳಿತಗಾರರು ಅಲ್ಪಸಂಖ್ಯಾತ ಸಮುದಾಯದ ನೌಕರರಿಗೆ 10 ದಿನಗಳ ರಜೆಯನ್ನು ನೀಡಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ನಗರದ ಹೃದಯ ಭಾಗದಲ್ಲಿನ ಸರ್ಕಾರಿ ಶಾಲೆಯ ಒಳಗಡೆ ಗುರುವಾರ ಮಹಿಳಾ ಪ್ರಿನ್ಸಿಪಾಲ್ ಹಾಗೂ ಶಿಕ್ಷಕಿಯೊಬ್ಬರನ್ನು ಗುರುವಾರ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಏಳು ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಈ ಏಳು ಮಂದಿಯಲ್ಲಿ ನಾಲ್ವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಈ ಹತ್ಯೆ ಗುರಿಯೊಂದಿಗೆ 2010-11ರಲ್ಲಿ ಪ್ರಧಾನ ಮಂತ್ರಿ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಹುದ್ದೆ ಪಡೆದಿರುವ ಕಾಶ್ಮೀರಿ ಪಂಡಿತ್ ಸಮುದಾಯದ ಸದಸ್ಯರು, ತಮ್ಮ ಮೇಲೆ ಉಗ್ರರು ದಾಳಿ ನಡೆಸಬಹುದೆಂಬ ಭೀತಿಗೊಳಗಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಜನರು ಬುದ್ಗಾಮ್, ಅನಂತ್ ನಾಗ್ ಮತ್ತು ಪುಲ್ವಾಮದಂತಹ ಪ್ರದೇಶಗಳನ್ನು ತೊರೆಯಲು ಆರಂಭಿಸಿದ್ದಾರೆ.

ಕಾಶ್ಮೀರಿ ಪಂಡಿತ್ ಅಲ್ಲದ ಕೆಲ ಕುಟುಂಬಗಳು ಸಹ ತೊರೆಯುತ್ತಿದ್ದಾರೆ. 1990ರ ದಾಳಿ ಮರು ಕಳಿಸುತ್ತಿದೆ ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ ಅಧ್ಯಕ್ಷ ಸಂಜಯ್ ಟಿಕು ಹೇಳಿದ್ದಾರೆ. ಜೂನ್ ನಲ್ಲಿ ಉಪ ರಾಜ್ಯಪಾಲರ ಭೇಟಿಗೆ ಮನವಿ ಸಲ್ಲಿಸಿದ್ದೇವು. ಆದರೆ, ಈವರೆಗೂ ಭೇಟಿಗೆ ಅವಕಾಶ ದೊರೆತಿಲ್ಲ. ಸಾಮಾಜಿಕ ಮಾಧ್ಯಮಗಳಿಂದ ಇಂತಹ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದರು.

SCROLL FOR NEXT