ದೇಶ

ಮನಿ ಲಾಂಡರಿಂಗ್ ಪ್ರಕರಣ: ಎನ್‌ಸಿಪಿ ನಾಯಕ ಏಕನಾಥ್ ಖಾಡ್ಸೆ ಪತ್ನಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

Lingaraj Badiger

ಮುಂಬೈ: ಪುಣೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ನಾಯಕ ಏಕನಾಥ ಖಾಡ್ಸೆಯವರ ಪತ್ನಿ ಮಂದಾಕಿನಿ ಖಾಡ್ಸೆ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿರುವ ವಿಶೇಷ ಕೋರ್ಟ್, ಅವರ ವಿರುದ್ಧ ಮಂಗಳವಾರ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.

ಮನಿ ಲಾಂಡರಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್‌ ನೀಡಿದರೂ ವಿಚಾರಣೆಗೆ ಹಾಜರಾಗದ ಮಂದಾಕಿನಿ ಅವರ "ನಡವಳಿಕೆ ಮತ್ತು ಅವಿಧೇಯತೆ" ಯನ್ನು ಪರಿಗಣಿಸಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ನೀಡುತ್ತಿರುವುದಾಗಿ ವಿಶೇಷ ನ್ಯಾಯಾಧೀಶ ಎಚ್‌ಎಸ್‌ ಸತ್‌ಭಾಯಿ ಅವರು ಹೇಳಿದ್ದಾರೆ.

ಅಕ್ಟೋಬರ್ 21 ರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪತಿ ಏಕನಾಥ ಖಾಡ್ಸೆ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಜಾರಿ ನಿರ್ದೇಶನಾಲಯವು(ಇಡಿ) ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ಸ್ವೀಕರಿಸಿದ ನಂತರ ನ್ಯಾಯಾಲಯವು ಖಾಡ್ಸೆ, ಆತನ ಪತ್ನಿ ಮತ್ತು ಪ್ರಕರಣದ ಇತರ ಆರೋಪಿಗಳನ್ನು ಕರೆಸಿತು. 

ಖಾಡ್ಸೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಕಾರಣಕ್ಕಾಗಿ ವಿಚಾರಣೆಯಿಂದ ವಿನಾಯಿತಿ ಕೋರಿದರು. ಅಲ್ಲದೆ ಅವರ ಪತ್ನಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದರು. ಆದರೆ ನಿರೀಕ್ಷಣಾ ಜಾಮೀನು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

SCROLL FOR NEXT