ದೇಶ

ಪುಣೆ: ಸೇನೆ ತರಬೇತಿ ಸಂಸ್ಥೆಯಲ್ಲಿ ಮಹಿಳಾ ಸೇನಾಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Srinivas Rao BV

ಪುಣೆ: ಭಾರತೀಯ ಸೇನೆಯ 43 ವರ್ಷದ ಮಹಿಳಾ ಅಧಿಕಾರಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪುಣೆಯ ಸೇನಾ ಗುಪ್ತಚರ ತರಬೇತಿ ಶಾಲೆ ಹಾಗೂ ಡಿಪೋ (ಎಂಐಎನ್ ಟಿ ಎಸ್ ಡಿ) ನಲ್ಲಿ ವರದಿಯಾಗಿದೆ.

ಸೇನೆ ಹಾಗೂ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಅಧಿಕಾರಿಗೆ ಸಂಸ್ಥೆಯ ಸಿಬ್ಬಂದಿಗಳು ಅ.13 ರಂದು ಬೆಳಿಗ್ಗೆ ಟೀ ನೀಡಲು ತೆರಳಿದಾಗ ಅಧಿಕಾರಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

"ದುಪಟ್ಟಗೆ ನೇಣುಬಿಗಿದುಕೊಂಡು ನೇತಾಡುತ್ತಿದ್ದ ಪರಿಸ್ಥಿತಿಯಲ್ಲಿ ಶವ ಪತ್ತೆಯಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ ಲೆಫ್ಟಿನೆಂಟ್ ಕರ್ನಲ್ ಎಂಐಎನ್ ಟಿಎಸ್ ಡಿಗೆ ತರಬೇತಿಗಾಗಿ ಆಗಮಿಸಿದ್ದರು.

ಮಹಿಳಾ ಅಧಿಕಾರಿ ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಅಷ್ಟೇ ಅಲ್ಲದೇ ವಿಚ್ಛೇದನಕ್ಕಾಯೂ ಅರ್ಜಿ ಸಲ್ಲಿಸಿದ್ದರು ಎಂದು ಜೋನ್ V ನ ಡಿಸಿಪಿ ನಮ್ರತಾ ಪಾಟೀಲ್ ಹೇಳಿದ್ದಾರೆ. "ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿಪಿ" ಹೇಳಿದ್ದಾರೆ.

"ಸೇನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಸೇನಾ ಗುಪ್ತಚರ ತರಬೇತಿ ಶಾಲೆ ಹಾಗೂ ಡಿಪೋದಲ್ಲಿ ತರಬೇತಿಗಾಗಿ ಆಗಮಿಸಿದ್ದ ಮಹಿಳಾ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ" ಎಂದು ತಿಳಿಸಿದೆ.
 

SCROLL FOR NEXT