ದೇಶ

ಸೆಲ್ಯುಲಾರ್ ಜೈಲಿಗೆ ಗೃಹ ಸಚಿವ ಅಮಿತ್ ಶಾ ಭೇಟಿ: ಸಾವರ್ಕರ್ ಬಂಧಿಸಿದ್ದ ಸೆಲ್​ಗೆ ಪುಷ್ಪಾರ್ಚನೆ

Vishwanath S

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೂರು ದಿನಗಳ ಭೇಟಿಗಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್‌ಗೆ ಆಗಮಿಸಿದ್ದು, ಇಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅಮಿತ್​ ಶಾ ಪೋರ್ಟ್ ಬ್ಲೇರ್‌ನ ಸೆಲ್ಯುಲಾರ್ ಜೈಲಿನಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಬಂಧಿಸಿದ್ದ ಸೆಲ್‌ಗೆ ಭೇಟಿ ನೀಡಿ, ಹುತಾತ್ಮರ ಸ್ತಂಭಕ್ಕೆ ಪುಪ್ಪಾರ್ಚನೆ ಮಾಡಿದರು.

ಇಂದು ನಾನು ವಿನಾಯಕ್ ದಾಮೋದರ್ ಅವರ ಸೆಲ್‌ಗೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದೆ. ನನ್ನಂತಹ ವ್ಯಕ್ತಿಗೆ ಇದು ಭಾವನಾತ್ಮಕ ಕ್ಷಣ. ಬಹುಶಃ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಎರಡು ಬಾರಿ 'ಕಲಾ ಪಾಣಿ'ಗೆ ಹೋದವರಲ್ಲಿ ಇವರು ಒಬ್ಬರು ಇರಬಹುದು ಎಂದು ಪೋರ್ಟ್ ಬ್ಲೇರ್‌ನ ಸೆಲ್ಯುಲಾರ್ ಜೈಲಿನಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಪಶ್ಚಿಮ ಬಂಗಾಳವು ಉತ್ತಮ ಕೊಡುಗೆ ನೀಡಿದೆ. ನಾನು ಇಲ್ಲಿಗೆ ಬಂದಾಗ 1938ರ ವರೆಗೆ ಇಲ್ಲಿ ಇರಿಸಲಾಗಿರುವ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳ ಪಟ್ಟಿಯನ್ನು ನಾನು ಓದಿದ್ದೇನೆ. ಬಂಗಾಳ ಮತ್ತು ಪಂಜಾಬ್ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಹೊಂದಿದ ರಾಜ್ಯಗಳಾಗಿವೆ ಎಂದರು.

ಸಾವರ್ಕರ್ ಅವರು ಸೆಲ್ಯುಲಾರ್ ಜೈಲನ್ನು 'ತೀರ್ಥಸ್ಥಾನ'ವಾಗಿ ಪರಿವರ್ತಿಸಿದರು. ನೀವು ನಮಗೆ ಬೇಕಾದಷ್ಟು ಚಿತ್ರಹಿಂಸೆ ನೀಡಿ, ಆದ್ರೆ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಜಗತ್ತಿಗೆ ಸಂದೇಶ ನೀಡಿದ್ದರು. 'ನನ್ನ ದೇಶವನ್ನು ಸ್ವತಂತ್ರಗೊಳಿಸುವುದು ನನ್ನ ಜನ್ಮಸಿದ್ಧ ಹಕ್ಕು' ಸಾವರ್ಕರ್ ಇದನ್ನು ಇಲ್ಲಿ ಸಾಧಿಸಿದರು ಎಂದು ಅಮಿತ್​​ ಶಾ ಹೇಳಿದ್ದಾರೆ.

SCROLL FOR NEXT