ದೇಶ

'ನಿನ್ನಂತವರು ನಮ್ಮ ಸಮುದಾಯಕ್ಕೆ ಕಳಂಕ' ಯುವತಿಯಿಂದ ಬಲವಂತವಾಗಿ ಹಿಜಾಬ್​ ತೆಗೆಸಿದ ದುಷ್ಕರ್ಮಿಗಳು, ವಿಡಿಯೋ ವೈರಲ್!

Vishwanath S

ಭೋಪಾಲ್: ಸ್ಕೂಟರ್​ನಲ್ಲಿ ಯುವಕನೊಂದಿಗೆ ಸವಾರಿ ಮಾಡುತ್ತಿದ್ದ ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿರುವ ಕೆಲವರು ಹಿಜಾಬ್​ ತೆಗೆಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಮಹಿಳೆ ಪುರುಷನೊಂದಿಗೆ ಸ್ಕೂಟರ್​​ನಲ್ಲಿ ಸವಾರಿ ಮಾಡುತ್ತಿದ್ದಾಗ, ಕೆಲವು ದುಷ್ಕರ್ಮಿಗಳು ಭೋಪಾಲ್‌ನ ಇಸ್ಲಾಂ ನಗರದ ಕಿರಿದಾದ ರಸ್ತೆಯಲ್ಲಿ ಅವರನ್ನು ತಡೆದು ಆಕೆ ಧರಿಸಿದ್ದ ಹಿಜಾಬ್​​ನನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿ ಹಿಜಾಬ್ ತೆಗೆಯಲು ನಿರಾಕರಿಸುತ್ತಾಳೆ. ಅಲ್ಲದೇ ಅಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಈ ಮಹಿಳೆ ನಮ್ಮ ಸಮುದಾಯಕ್ಕೆ ಅವಮಾನ ಎಂದಿರುವುದನ್ನು ನಾವು ವಿಡಿಯೋದಲ್ಲಿ ಕೇಳಬಹುದಾಗಿದೆ.

ಮಹಿಳೆ ಹಿಂದೂ ಪುರುಷನೊಂದಿಗೆ ಇದ್ದಾಳೆ ಎಂದು ಅಲ್ಲಿ ನೆರೆದಿದ್ದ ಜನರು ಶಂಕಿಸಿದ್ದಾರೆ. ಆದ್ದರಿಂದ ಅವರು ಬಲವಂತವಾಗಿ ಸ್ಕೂಟರ್ ನಿಲ್ಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಓರ್ವ ಯುವಕ ಮತ್ತು ಯುವತಿ ಮಧ್ಯಾಹ್ನ ಇಸ್ಲಾಂ ನಗರಕ್ಕೆ ಬಂದರು. ಕೆಲವರು ಅವಳನ್ನು ತಡೆದು ಅವಳ ಹಿಜಾಬ್ ತೆಗೆದು ಮುಖ ತೋರಿಸಲು ಕೇಳಿದರು. ಆ ವ್ಯಕ್ತಿ ಹಿಂದೂ ಮತ್ತು ಹುಡುಗಿ ಮುಸ್ಲಿಂ ಎಂದು ಜನರು ನಂಬಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಆರ್ ಎಸ್ ವರ್ಮಾ ತಿಳಿಸಿದರು.

ಈ ಸಂಬಂಧ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ, ಆದರೆ ಅಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಸ್ಕೂಟಿ ತಡೆದಿದ್ದವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ವರ್ಮಾ ಹೇಳಿದರು.

ಕಳೆದ ತಿಂಗಳು, ಬೆಂಗಳೂರಿನಲ್ಲಿ ಮುಸ್ಲಿಂ ಮಹಿಳಾ ಸಹೋದ್ಯೋಗಿ ತನ್ನ ಮೋಟಾರ್‌ ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದಂತೆ ಬ್ಯಾಂಕ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋದಲ್ಲಿ ಇಬ್ಬರನ್ನು ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಬಂಧಿಸಲಾಯಿತು.

SCROLL FOR NEXT