ದೇಶ

ಮಳೆಗೆ ಕೇರಳ ತತ್ತರ: ಪ್ರವಾಹ, ಭೂ ಕುಸಿತದಿಂದ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆ

Nagaraja AB

ತಿರುವನಂತಪುರಂ: ಕೇರಳದಲ್ಲಿ ಪ್ರವಾಹ, ಭೂಕುಸಿತಕ್ಕೆ ಕಾರಣವಾದ ಧಾರಾಕಾರ ಮಳೆಯು ಇಲ್ಲಿಯವರೆಗೆ 27 ಜನರ ಜೀವವನ್ನು ಬಲಿ ತೆಗೆದುಕೊಂಡಿದೆ. ಈ ಪೈಕಿ 13 ಜನರು ಕೊಟ್ಟಾಯಂ ಜಿಲ್ಲೆಯಲ್ಲಿ, 10 ಮಂದಿ ಇಡುಕಿ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ತಿರುವನಂಪುರಂ, ತ್ರಿಸೂರ್ ಮತ್ತು ಕೊಝಿಕೋಡ್ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಈ ಮಧ್ಯೆ ಕೊಟ್ಟಾಯಂನ ಕೊಟ್ಟಿಕಾಲ್ ಗ್ರಾಮದ ಪ್ಲಾಪಲಿ ಸಂಭವಿಸಿದ ಭೂ ಕುಸಿತದಿಂದ ಮೃತಪಟ್ಟಿದ್ದ 13 ಜನರ ಮೃತದೇಹಗಳು ಪತ್ತೆಯಾಗಿದೆ. ಇಡುಕಿ ಜಿಲ್ಲೆಯ ಕೊಕ್ಕಾಯರ್ ನಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ನಾಲ್ಕು ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಐವರು ಮಕ್ಕಳು, ಇಬ್ಬರು ಹದಿಹರದೆಯವರು ಸೇರಿದಂತೆ ಏಳು ಮಂದಿ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಪ್ರಸ್ತುತ 2,169 ಕುಟುಂಬಗಳು  247 ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದು, ಒಟ್ಟಾರೇ 9,422 ಜನರು ಇಂತಹ ಪರಿಹಾರ ಕ್ಯಾಂಪ್ ಗಳಲ್ಲಿ ವಾಸಿಸುತ್ತಿರುವುದಾಗಿ  ಮೂಲಗಳಿಂದ ತಿಳಿದುಬಂದಿದೆ.

ಪರಿಹಾರ ಶಿಬಿರಗಳಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸಬೇಕು, ಆಹಾರ, ಬಟ್ಟೆ ಮತ್ತು ಹಾಸಿಗೆ ವ್ಯವಸ್ಥೆಯನ್ನು ಪೂರೈಸಬೇಕೆಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನಿರ್ದೇಶಿಸಿದ್ದಾರೆ. ಕಂದಾಯ ಇಲಾಖೆ ಅಲ್ಲದೇ, ಸ್ಥಳೀಯ ಸಂಸ್ಥೆಗಳಿಗೂ ಈ ರೀತಿಯ ಸೂಚನೆ ನೀಡಲಾಗಿದೆ. ಸ್ಥಳೀಯ ಸಮುದಾಯಗಳಿಂದ ಸಹಾಯ ಪಡೆಯುವಂತೆಯೂ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ. 

SCROLL FOR NEXT