ದೇಶ

ಸೇನೆಯ ರಣಬೇಟೆ: ರಚೌರಿ ಅರಣ್ಯದಲ್ಲಿ 6 ಮಂದಿ ಲಷ್ಕರ್-ಇ-ತೊಯ್ಬಾ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರು

Vishwanath S

ಶ್ರೀನಗರ: ಪಾಕಿಸ್ತಾನದಲ್ಲಿ ತರಬೇತಿ ಪಡೆದ ಆರು ಭಯೋತ್ಪಾದಕರು ಪಾಕ್ ಬೆಂಬಲಿತ ಉಗ್ರಗಾಮಿ ಗುಂಪು ಲಷ್ಖರ್-ಎ-ತೊಯ್ಬಾದ ಆರು ಸಶಸ್ತ್ರ ಸರ್ಜಿತ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. 

ಕಾಶ್ಮೀರ ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಯಲು ಉಗ್ರರು ಯೋಜಿಸಿದ್ದರು ಎಂದು ವರದಿಯಾಗಿದೆ. ರಾಜೌರಿ ಸೆಕ್ಟರ್‌ನ ದಟ್ಟಾರಣ್ಯದಲ್ಲಿ 16 ಕಾರ್ಪ್ಸ್ ಕಮಾಂಡರ್ ಯೋಧರ ಮತ್ತು ಉಗ್ರರ ನಡುವಿನ ಗುಂಡಿನ ಚಕಮಿಕಿ ನಡೆದಿದ್ದು ಕೊನೆಗೆ ಆರು ಉಗ್ರರು ಭಾರತೀಯ ಯೋಧರ ಗುಂಡೇಟಿಗೆ ಬಲಿಯಾಗಿದ್ದಾರೆ. 

ರಾಜೌರಿ ಅರಣ್ಯದಲ್ಲಿ 9 ಭಾರತೀಯ ಯೋಧರನ್ನು ಕಳೆದುಕೊಂಡ ನಂತರ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅಕ್ಟೋಬರ್ 17ರಂದು ಆ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಉಗ್ರ-ವಿರೋಧಿ ಕಾರ್ಯಾಚರಣೆಗಳು ಮತ್ತು ಶೋಧಗಳು ತೀವ್ರಗೊಂಡಿದ್ದವು.

ಪಾಕಿಸ್ತಾನದಿಂದ ಒಂಬತ್ತರಿಂದ 10 ಲಷ್ಕರ್ ಉಗ್ರರು ಕಳೆದ ಎರಡು ಮೂರು ತಿಂಗಳಲ್ಲಿ ರಾಜೌರಿ-ಪುಂಚ್ ಜಿಲ್ಲೆಯ ಗಡಿಯಲ್ಲಿ ಕಾಡಿನೊಳಗೆ ನುಸುಳಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚಿನ ಉಗ್ರರು ಒಳನುಸುಳಲು ಕಾಯುತ್ತಿದ್ದಾರೆ ಎಂದು ವರದಿಯಾಗಿದೆ. 

ಭಾರತೀಯ ಸೇನೆಯು ಸೆಪ್ಟೆಂಬರ್ ಅಂತ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಕಾರ್ಯಾಚರಣೆ ನಡೆಸಿತು. ಶೋಧ ಕಾರ್ಯಾಚರಣೆ ಬಹಳ ಯಶಸ್ವಿಯಾಯಿತು. ಕಾರ್ಯಾಚರಣೆಯ ಸಮಯದಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನಿ ಉಗ್ರನನ್ನು ಹೊಡೆದುರುಳಿಸಿತು. ಎನ್‌ಕೌಂಟರ್‌ನಲ್ಲಿ ಮತ್ತೊಬ್ಬ ಉಗ್ರನನ್ನು ಸೆರೆಹಿಡಿಯಲಾಗಿತ್ತು.

ಉರಿ ಕಾರ್ಯಾಚರಣೆಯಲ್ಲಿ ಏಳು ಎಕೆ ಸರಣಿಯ ಬಂದೂಕುಗಳು, ಒಂಬತ್ತು ಪಿಸ್ತೂಲ್‌ಗಳು ಮತ್ತು ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಇನ್ನು 60ಕ್ಕೂ ಹೆಚ್ಚು ಗ್ರೆನೇಡ್‌ಗಳು ಮತ್ತು ಭಾರತೀಯ ಮತ್ತು ಪಾಕಿಸ್ತಾನದ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಉಗ್ರನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಸದಸ್ಯ ಎಂದು ಹೇಳಲಾಗಿದೆ. ಆತನ ಮನೆ ಪಾಕಿಸ್ತಾನದ ಪಂಜಾಬ್ ನ ಒಖರಾದಲ್ಲಿದೆ. ಹೆಸರು ಅಲಿ ಬಾಬರ್ ಪತ್ರ ಎಂದು ಸೇನೆ ಪತ್ತೆ ಮಾಡಿದೆ.

SCROLL FOR NEXT