ದೇಶ

ನಮ್ಮ ಸರ್ಕಾರ ಜನರಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಡಬಹುದು ಎಂಬ ನಂಬಿಕೆ  ಮೂಡಿಸಿದೆ: ಪ್ರಧಾನಿ ಮೋದಿ

Sumana Upadhyaya

ಕೆವಾಡಿಯಾ: ಕಳೆದ ಆರೇಳು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಕಠಿಣ ಪರಿಶ್ರಮದಿಂದಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಬಹುದು ಮತ್ತು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ಯೋಜನೆಗಳ ಲಾಭ ಸಿಗುತ್ತವೆ ಎಂಬ ನಂಬಿಕೆ ಜನರಲ್ಲಿ ಮೂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್ ನ ಕೆವಾಡಿಯಾದಲ್ಲಿ ಕೇಂದ್ರ ವಿಚಕ್ಷಣ ಆಯೋಗ ಮತ್ತು ಕೇಂದ್ರ ತನಿಖಾ ದಳದ ಜಂಟಿ ಸಮ್ಮೇಳನವನ್ನು ಅವರು ಇಂದು ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿ, ಹಿಂದಿನ ಯುಪಿಎ ಸರ್ಕಾರಕ್ಕೆ ಭ್ರಷ್ಟಾಚಾರ ವಿರುದ್ಧ ಹೋರಾಡುವ ಆಸಕ್ತಿಯೇ ಇರಲಿಲ್ಲ ಎಂದು ಆರೋಪಿಸಿದರು.

ಕಳೆದ ಆರೇಳು ವರ್ಷಗಳಲ್ಲಿ ದೇಶದಲ್ಲಿ ಭ್ರಷ್ಟಾಚಾರವನ್ನು ನಿಲ್ಲಿಸಬಹುದು ಎಂಬ ನಂಬಿಕೆ, ವಿಶ್ವಾಸ ಜನರಲ್ಲಿ ಮೂಡಿದೆ, ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಜನರಿಗೆ ತಲುಪುತ್ತಿವೆ ಎಂದರು. 

ಭ್ರಷ್ಟಾಚಾರ, ಅದು ದೊಡ್ಡದಾಗಲಿ, ಸಣ್ಣದಾಗಲಿ ಸಾಮಾನ್ಯ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ದೇಶದ ಪ್ರಗತಿಗೆ ಅದು ಹಿನ್ನಡೆಯಾಗಿದ್ದು ನಮ್ಮ ಸಾಮೂಹಿಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದರು.

ದೇಶದ ಮತ್ತು ಅಲ್ಲಿನ ನಾಗರಿಕರ ವಿರುದ್ಧ ಅಪರಾಧ ಮಾಡುವವರಿಗೆ ಜಗತ್ತಿನ ಯಾವ ಮೂಲೆ ಕೂಡ ಸುರಕ್ಷಿತವಾಗಿಲ್ಲ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.

SCROLL FOR NEXT