ಎನ್ ಸಿಬಿ ವಿಚಾರಣೆಗೆ ಹಾಜರಾದ ಅನನ್ಯ ಪಾಂಡೆ 
ದೇಶ

ಆರ್ಯನ್ ಖಾನ್ ಗೆ ಡ್ರಗ್ಸ್ ತೆಗೆದುಕೊಳ್ಳಲು ಸಹಾಯ ಮಾಡಿದ ಆರೋಪ: ಎನ್ ಸಿಬಿ ಎದುರು ಅನನ್ಯ ಪಾಂಡೆ ಹೇಳಿದ್ದಿಷ್ಟು...

ಸತತ ಎರಡನೇ ದಿನವೂ ನಟಿ ಅನನ್ಯ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. 

ಮುಂಬೈ: ಸತತ ಎರಡನೇ ದಿನವೂ ನಟಿ ಅನನ್ಯ ಪಾಂಡೆ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. 

ಮುಂಬೈ ಕ್ರೂಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಪ್ರಶ್ನೆ ಕೇಳಿದ್ದು, ತಮ್ಮ ವಿರುದ್ಧದ ಡ್ರಗ್ಸ್ ಪೂರೈಕೆ ಅಥವಾ ಸೇವನೆಯ ಆರೋಪವನ್ನು ನಿರಾಕರಿಸಿದ್ದಾರೆ.

ಆರ್ಯನ್ ಖಾನ್ ಅವರ ಮೊಬೈಲ್ ನಲ್ಲಿ ವಾಟ್ಸ್ ಆಪ್ ಚಾಟ್ ನಲ್ಲಿ ಅನನ್ಯ ಪಾಂಡೆ ಹೆಸರು ಉಲ್ಲೇಖಗೊಂಡಿತ್ತು. ಆರ್ಯನ್ ಖಾನ್ ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಅ.2 ರಂದು ಬಂಧನಕ್ಕೆ ಒಳಗಾಗಿದ್ದರು ಅ.08 ರಿಂದ ಜೈಲಿನಲ್ಲೇ ಇದ್ದಾರೆ.

ಆರ್ಯನ್ ಖಾನ್ ಚಾಟ್ ತಮಗೆ ಡ್ರಗ್ಸ್ ಪಡೆಯುವುದಕ್ಕೆ ಅನನ್ಯ ಪಾಂಡೆ ನೆರವನ್ನು ಸೂಚಿಸುವಂತಹ ಮೆಸೇಜ್ ಗಳನ್ನು ಕಳಿಸಿದ್ದರು. ಇದಕ್ಕೂ ಮುನ್ನ ಅನನ್ಯ ಪಾಂಡೆ ಎನ್ ಸಿಬಿ ಅಧಿಕಾರಿಗಳ ಎದುರು ತಮ್ಮ ತಂದೆ ಚಂಕಿ ಪಾಂಡೆಯೊಂದಿಗೆ ವಿಚಾರಣೆ ಎದುರಿಸಿದ್ದರು. 

ಮುಂಬೈ ಕ್ರೂಸ್ ಪಾರ್ಟಿಯಲ್ಲಿ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದ ಎನ್ ಸಿಬಿ ಅಧಿಕಾರಿಗಳು ಅನನ್ಯ ಪಾಂಡೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು. ವಿಚಾರಣೆ ವೇಳೆ ಅನನ್ಯ ಪಾಂಡೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ತಾವು ಎಂದಿಗೂ ಡ್ರಗ್ಸ್ ಸೇವನೆಯನ್ನಾಗಲೀ, ಪೂರೈಕೆಯನ್ನಾಗಲೀ ಮಾಡಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT