ತಿರುಪತಿ ತಿರುಮಲ ದೇವಸ್ಥಾನ 
ದೇಶ

ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ: ಆನ್​​ಲೈನ್​​ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ

ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್​​ನನ್ನು ಬಿಡುಗಡೆ ಮಾಡಿದೆ.

ತಿರುಮಲ: ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ.ನ ಟಿಕೆಟ್​​ನನ್ನು ಬಿಡುಗಡೆ ಮಾಡಿದೆ.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ದರ್ಶನ ಪಡೆಯಲು ಬಯಸುವವರು ಶುಕ್ರವಾರ ಬೆಳಗ್ಗೆ 9 ರಿಂದ ಟಿಕೆಟ್​​ ಕಾಯ್ದಿರಿಸಬಹುದಾಗಿದೆ. ಟಿಕೆಟ್‌ಗಳನ್ನು ವರ್ಚುಯಲ್‌ ಮಾದರಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಸರ್ವ ದರ್ಶನದ ಟಿಕೆಟ್‌ಗಳನ್ನು ಶನಿವಾರ ಬೆಳಗ್ಗೆ 9 ರಿಂದ ಆನ್‌ಲೈನ್ ಬುಕಿಂಗ್‌ಗೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿಯೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನಿತ್ಯ 12 ಸಾವಿರ ಟೋಕನ್‌ಗಳು ಲಭ್ಯ ಇದೆ. ಹಾಗೆಯೇ ನವೆಂಬರ್ ಕೋಟಾದ ಸರ್ವ ದರ್ಶನ ಟಿಕೆಟ್​​​ ಸ್ಲಾಟ್ ಅನ್ನು ಭಾನುವಾರ ಬೆಳಗ್ಗೆ 9ಗಂಟೆಗೆ ತೆರೆಯಲಿದ್ದು, ಭಕ್ತರು ಆನ್​​ಲೈನ್​ ಮೂಲಕ ಬುಕಿಂಗ್​ ಮಾಡಬಹುದು. 

ಕೊವಿಡ್​ 19 ನೆಗೆಟಿವ್​ ವರದಿ ತರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ಟಿಟಿಡಿ ಜಾರಿಗೊಳಿಸಿದೆ. ಈ ಮಧ್ಯೆ ದೇಗುಲಕ್ಕೆ ಭೇಟಿ ನೀಡಲು ಹೇರಿರುವ ಭಕ್ತರ ಸಂಖ್ಯಾ ಮಿತಿಯನ್ನು ಹೆಚ್ಚುಗೊಳಿಸಬೇಕು ಎಂಬ ಒತ್ತಡವೂ ಅದರ ಮೇಲೆ ಜಾಸ್ತಿಯಾಗುತ್ತಿದೆ. ಹಾಗಾಗಿ ಈ ಬಾರಿ ಕೋಟಾದಲ್ಲಿ ಜಾಸ್ತಿ ಟಿಕೆಟ್​ ಬಿಡುಗಡೆ ಮಾಡಬಹುದಾ ಎಂಬ ಕುತೂಹಲವೂ ಸಹಜವಾಗಿಯೇ ಎದ್ದಿದೆ.

ಸದ್ಯ ಒಂದು ದಿನಕ್ಕೆ 30,000ಕ್ಕಿಂತಲೂ  ಕಡಿಮೆ ಭಕ್ತರು ತಿರುಮಲ ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ. ಕೊವಿಡ್​ 19 ಸಾಂಕ್ರಾಮಿಕಕ್ಕೂ ಪೂರ್ವ ಈ ದೇವಾಲಯದಲ್ಲಿ ಒಂದು ದಿನಕ್ಕೆ 79-80 ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT