ದೇಶ

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಜು.1 ರಿಂದ ಪೂರ್ವಾನ್ವಯವಾಗುವಂತೆ ಜಾರಿ: ಹಣಕಾಸು ಸಚಿವಾಲಯ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದ್ದು ಜು.1, 2021 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದೆ. 

ಈ ಬಗ್ಗೆ ಹಣಕಾಸು ಸಚಿವಾಲಯ ಮಾಹಿತಿ ನೀಡಿದ್ದು, ಮೂಲ ವೇತನದ ಶೇ.28 ರಷ್ಟಿದ್ದ ತುಟ್ಟಿ ಭತ್ಯೆ ಈಗ ಶೇ.31 ಕ್ಕೆ ಏರಿಕೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದೆ.

ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ಖರ್ಚು ಇಲಾಖೆ ತುಟ್ಟಿಭತ್ಯೆ ಕುರಿತಾದ ಮಾಹಿತಿಯನ್ನು ನೀಡಿದ್ದು, ಮೂಲ ವೇತನ ಎಂದರೆ 7 ನೇ ವೇತನ ಯೋಗದ ಪ್ರಕಾರ ಪಡೆಯಲಾಗುತ್ತಿರುವ ವೇತನವಾಗಿದ್ದು ಯಾವುದೇ ವಿಶೇಷ ವೇತನವೂ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ರಕ್ಷಣಾ ಸೇವೆಗಳಿಂದ ಪಾವತಿ ಮಾಡಲಾಗುತ್ತಿರುವ ಪೌರ ಉದ್ಯೋಗಿಗಳಿಗೂ ಈ ತುಟ್ಟಿಭತ್ಯೆ ಅನ್ವಯವಾಗಲಿದೆ. ಆದರೆ ಸೇನಾ ಪಡೆಗಳ ಸಿಬ್ಬಂದಿಗಳು, ರೈಲ್ವೆ ಉದ್ಯೋಗಿಗಳಿಗೆ ರಕ್ಷಣಾ ಸಚಿವಾಲಯ, ರೈಲ್ವೆ ಸಚಿವಾಲಯಗಳಿಂದ ಪ್ರತ್ಯೇಕ ಆದೇಶ ಪ್ರಕಟವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಡಿಎಯಲ್ಲಿ ಶೇ.3 ರಷ್ಟು ಹೆಚ್ಚಳಕ್ಕೆ ಕೇಂದ ಸಚಿವ ಸಂಪುಟ ಸಭೆ ಕಳೆದ ವಾರ ಅನುಮೋದನೆ ನೀಡಿತ್ತು.
 

SCROLL FOR NEXT