ದೇಶ

ಅಯೋಧ್ಯೆ ರಾಮ ಮಂದಿರಕ್ಕೆ ಕೇಜ್ರಿಬಾಲ್ ಭೇಟಿ: 'ಜೈ ಶ್ರೀರಾಮ್' ಪಠಣ

Srinivas Rao BV

ಅಯೋಧ್ಯೆ: ಹಿಂದೊಮ್ಮೆ ನಾಸ್ತಿಕನಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈಗ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.

ಅ.26 ರಂದು ಅರವಿಂದ್ ಕೇಜ್ರಿವಾಲ್ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ.

ಭಗವಾನ್ ರಾಮಲಲ್ಲಾ ಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಭಾಷಣವನ್ನು ಜೈ ಶ್ರೀರಾಮ್ ಘೋಷಣೆಯೊಂದಿಗೆ ಅವರು ಪ್ರಾರಂಭಿಸಿದರು. ಈ ವೇಳೆ ಮಾತನಾಡಿದ ಅವರು, " ರಾಷ್ಟ್ರರಾಜಧಾನಿಯ ಹಿರಿಯ ನಾಗರಿಕರಿಗೆ ಕಲ್ಪಿಸಲಾಗುವ ಉಚಿತ ತೀರ್ಥಯಾತ್ರೆಗಳ ಪ್ರದೇಶಗಳ ಪಟ್ಟಿಯಲ್ಲಿ ಅಯೋಧ್ಯೆಯ ರಾಮ ಮಂದಿರವನ್ನೂ ಸೇರಿಸುವ ವಿಷಯವಾಗಿ ಅ.27 ರಂದು ವಿಶೇಷ ಸಚಿವ ಸಂಪುಟ ನಡೆಸುವುದಾಗಿ ತಿಳಿಸಿದ್ದಾರೆ.

"ಇಂದು ಭಗವಾನ್ ರಾಮನ ಜನ್ಮಭೂಮಿಯ ದರ್ಶನ ಪಡೆದು ಸರಯೂ ಮಾತೆಗೆ ಆರತಿ ಬೆಳಗುವ ಅವಕಾಶ ಸಿಕ್ಕಿತು. ನಮ್ಮ ದೇಶ ಕೋವಿಡ್-19 ಮುಕ್ತವಾಗಬೇಕು ಹಾಗೂ ಎಲ್ಲರೂ ಸಾಮರಸ್ಯದಿಂದ ಜೀವಿಸುವಂತಾಗಬೇಕು" ಎಂದು ಭಗವಂತನಲ್ಲಿ ಪ್ರಾರ್ಥಿಸಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ. ಭಗವಾನ್ ಶ್ರೀರಾಮನ ದರ್ಶನ ಮಾಡುವ ಸೌಭಾಗ್ಯ ಎಲ್ಲಾ ಭಾರತೀಯರಿಗೂ ಲಭ್ಯವಾಗಬೇಕೆಂದು ಕೇಜ್ರಿವಾಲ್ ಹೇಳಿದ್ದಾರೆ.

SCROLL FOR NEXT