ಕ್ಯಾ.ಅಮರಿಂದರ್ ಸಿಂಗ್ 
ದೇಶ

'ಹೊಸ ಪಕ್ಷ ಕಟ್ಟುತ್ತೇನೆ, ಚುನಾವಣಾ ಆಯೋಗ ಅನುಮತಿ ನೀಡಿದ ಕೂಡಲೇ ಪಕ್ಷದ ಹೆಸರು, ಚಿಹ್ನೆ ಘೋಷಣೆ': ಕ್ಯಾ. ಅಮರಿಂದರ್ ಸಿಂಗ್

ನಾನು ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದು ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಘೋಷಣೆ ಮಾಡುತ್ತೇನೆ, ನನ್ನ ವಕೀಲರು ಈ ಕುರಿತಂತೆ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ ಸಿಂಗ್ ಹೇಳಿದ್ದಾರೆ.

ಚಂಡೀಗಢ: ನಾನು ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದು ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಘೋಷಣೆ ಮಾಡುತ್ತೇನೆ, ನನ್ನ ವಕೀಲರು ಈ ಕುರಿತಂತೆ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ ಸಿಂಗ್ ಹೇಳಿದ್ದಾರೆ.

ಚಂಡೀಗಢದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಯ ಬಂದಾಗ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. ಸೀಟು ಹಂಚಿಕೆ ಅಥವಾ ನಾವೇ ಸ್ವಂತವಾಗಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಎಂದು ನೋಡಬೇಕು ಎಂದರು. 

ಕೇಂದ್ರ ಸರ್ಕಾರದ ತಿದ್ದುಪಡಿ ಕೃಷಿ ಕಾಯ್ದೆ ಬಗ್ಗೆ ನಿಮ್ಮ ನಿಲುವೇನು, ರೈತರ ಪರ ಹೇಗೆ ನಿಲ್ಲುತ್ತೀರಿ ಎಂದು ಕೇಳಿದಾಗ ನಮ್ಮ ಜೊತೆ 25ರಿಂದ 30 ಮಂದಿಯನ್ನು ಕರೆದುಕೊಂಡು ನಾಳೆ ದೆಹಲಿಗೆ ಹೋಗಿ ಗೃಹ ಸಚಿವರನ್ನು ಭೇಟಿ ಮಾಡುತ್ತೇವೆ, ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಬಳಿ ಚರ್ಚಿಸುತ್ತೇವೆ ಎಂದರು. 

ನವಜೋತ್ ಸಿಂಗ್ ಸಿಧು ಅವರಿಗೆ ಸಂಬಂಧಪಟ್ಟಂತೆ ಕೇಳಿದಾಗ ಅವರು ಹೋರಾಟ ಮಾಡಿದಲ್ಲೆಲ್ಲ ನಾವು ಕೂಡ ಮಾಡುತ್ತೇವೆ ಎಂದರು. 

ಈ ನಾಲ್ಕೂವರೆ ವರ್ಷಗಳಲ್ಲಿ ನಾನು ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ನಾವು ಮಾಡಿದ ಸಾಧನೆಗಳು ಈ ಪುಸ್ತಕದಲ್ಲಿವೆ ಎಂದು ತೋರಿಸಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಚುನಾವಣಾ ಪ್ರಣಾಳಿಕೆಯಿದು. ಇದು ನಂತರ ಮುಖ್ಯಮಂತ್ರಿಯಾದ ನಂತರ ಮಾಡಿದ ಸಾಧನೆಗಳು ಎಂದರು.

ಪಂಜಾಬ್ ನ ಗೃಹ ಸಚಿವನಾಗಿ ನಾನು ಒಂಭತ್ತೂವರೆ ವರ್ಷಗಳ ಕಾಲವಿದ್ದೆ. ಒಂದು ತಿಂಗಳು ಗೃಹ ಸಚಿವರಾದವರು ನನಗಿಂತ ಹೆಚ್ಚು ತಿಳಿದಿದ್ದಾರೆ ಎಂದು ಹೇಳಿದರು. ಯಾರೂ ಕೂಡ ಪಂಜಾಬ್ ಗೆ ತೊಂದರೆ ನೀಡಲು ಬಯಸಲಿಲ್ಲ. ಪಂಜಾಬ್ ಅತ್ಯಂತ ಕಷ್ಟದ ಸಮಯವನ್ನು ಎದುರಿಸಿದೆ ಎಂದರು.

ಭದ್ರತಾ ಕ್ರಮಗಳ ಬಗ್ಗೆ ಅವರು ನನ್ನನ್ನು ಅಣಕಿಸುತ್ತಾರೆ, ನಾನು ಸೇನೆಯಲ್ಲಿ ಮೂಲ ತರಬೇತಿಯನ್ನು ಸೈನಿಕನಾಗಿ ಪಡೆದಿದ್ದು 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ತರಬೇತಿ ದಿನಗಳಿಂದ ಸೇನೆಯನ್ನು ತ್ಯಜಿಸುವವರೆಗೆ ನಾನು ಮೂಲ ಅವಶ್ಯಕತೆಗಳ, ಮೂಲ ಸ್ಥಿತಿಗಳ ಬಗ್ಗೆ ತಿಳಿದಿದ್ದೇನೆ ಎಂದು ಹೆಸರು ಹೇಳದೆ ಕಾಂಗ್ರೆಸ್ ನಾಯಕರಿಗೆ ಕ್ಯಾ.ಅಮರಿಂದರ್ ಸಿಂಗ್ ತಿರುಗೇಟು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT