ದೇಶ

ಕಳೆದ ವರ್ಷ ನಿತ್ಯ 31 ಮಕ್ಕಳು ಆತ್ಮಹತ್ಯೆ; ಬೆಚ್ಚಿಬೀಳಿಸಿದ ಎನ್​ಸಿಆರ್​ಬಿ ವರದಿ!

Vishwanath S

ನವದೆಹಲಿ: ಕೌಟುಂಬಿಕ ಕಾರಣಗಳು ಹಾಗೂ ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಕಳೆದ ವರ್ಷ ಪ್ರತಿದಿನ 31 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ತಿಳಿದುಬಂದಿದೆ. 

ಈ ಕುರಿತು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ ನ್ಯಾಷನಲ್ ಕ್ರೈಮ್ ರಿಕಾರ್ಡ್ ಬ್ಯುರೋ(ಎನ್​ಸಿಆರ್​ಬಿ), ಕಳೆದ ವರ್ಷ ದೇಶದಲ್ಲಿ 11 ಸಾವಿರದ 396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕರೋನಾ ಮಹಾಮಾರಿಯೂ ಕಾರಣವಾಗಿದೆ. ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೋವಿಡ್ ಆಳವಾದ ಪ್ರಭಾವ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ, ಕಳೆದ ವರ್ಷ 11 ಸಾವಿರದ 396 ಮಕ್ಕಳು ಪ್ರಾಣ ತ್ಯಜಿಸಿದ್ದಾರೆ. ಇದನ್ನು 2019ರ ದಾಖಲೆಗಳಿಗೆ ಹೋಲಿಸಿದರೆ ಶೇಕಡಾ 18ರಷ್ಟು ಹಾಗೂ 2018ನೇ ವರ್ಷಕ್ಕೆ ಹೋಲಿಸಿದರೆ ಶೇಕಡಾ 21ರಷ್ಟು ಹೆಚ್ಚಳ ಕಂಡುಬಂದಿರುವುದು ಆಘಾತವನ್ನು ತರಿಸಿದೆ. 2019ರಲ್ಲಿ ದೇಶದಲ್ಲಿ ಒಟ್ಟು 9,613 ಹಾಗೂ 2018ರಲ್ಲಿ 9,413 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 

SCROLL FOR NEXT