ಅಮಿತ್ ಶಾ 
ದೇಶ

ರಾಷ್ಟ್ರೀಯ ಏಕತಾ ದಿವಸ್​​ ಆಚರಣೆ; ಸರ್ದಾರ್​ ವಲ್ಲಭಭಾಯಿ ಪಟೇಲ್​ ಪ್ರತಿಮೆಗೆ ಅಮಿತ್​ ಶಾರಿಂದ ಮಾಲಾರ್ಪಣೆ

ಇಂದು ಸರ್ದಾರ್​ ವಲ್ಲಭಭಾಯಿ ಪಟೇಲ್​​ ಅವರ 146ನೇ ಜನ್ಮಜಯಂತಿಯಾಗಿದ್ದು, ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಗೃಹ ಸಚಿವ ಅಮಿತ್​ ಶಾ ಅವರು ಗುಜರಾತ್​​ನ ಕೇವಾಡಿಯಾದಲ್ಲಿರುವ ವಲ್ಲಭಭಾಯಿಯವರ 182 ಮೀಟರ್​ ಎತ್ತರದ ಏಕತಾ ಮೂರ್ತಿಯ ಬಳಿ ತೆರಳಿ ಗೌರವ ಸಲ್ಲಿಸಿದ್ದಾರೆ.

ನವದೆಹಲಿ: ಇಂದು ಸರ್ದಾರ್​ ವಲ್ಲಭಭಾಯಿ ಪಟೇಲ್​​ ಅವರ 146ನೇ ಜನ್ಮಜಯಂತಿಯಾಗಿದ್ದು, ದೇಶಾದ್ಯಂತ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಗೃಹ ಸಚಿವ ಅಮಿತ್​ ಶಾ ಅವರು ಗುಜರಾತ್​​ನ ಕೇವಾಡಿಯಾದಲ್ಲಿರುವ ವಲ್ಲಭಭಾಯಿಯವರ 182 ಮೀಟರ್​ ಎತ್ತರದ ಏಕತಾ ಮೂರ್ತಿಯ ಬಳಿ ತೆರಳಿ ಗೌರವ ಸಲ್ಲಿಸಿದ್ದಾರೆ.

ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿರುವ ಪಟೇಲ್​ ಜಿ ಜನ್ಮದಿನವನ್ನು 2014ರಿಂದಲೂ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ತಿಂಗಳ ಕಾರ್ಯಕ್ರಮ ಮನ್​ ಕೀ ಬಾತ್​​ನಲ್ಲಿ ಕೂಡ ರಾಷ್ಟ್ರೀಯ ಏಕತಾ ದಿನ ಆಚರಣೆಯನ್ನು ನೆನಪಿಸಿದ್ದರು.

ಸದ್ಯ ರೋಮ್​ ಪ್ರವಾಸದಲ್ಲಿರುವ ಅವರು, ಬೆಳಗ್ಗೆ ಟ್ವೀಟ್​ ಮಾಡಿ ಸರ್ದಾರ್​ ವಲ್ಲಭಭಾಯಿ ಅವರ ಜೀವನದ ಬಗ್ಗೆ ತಾವು ಮಾತನಾಡಿದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ಗೌರವ ಸಲ್ಲಿಸಿದ್ದಾರೆ.

ನಮ್ಮ ರಾಷ್ಟ್ರದ ಹಿರೋ ಸರ್ದಾರ್​ ವಲ್ಲಭಭಾಯಿ ಪಟೇಲ್​​ರಿಗೆ ಇಂದು ಇಡೀ ರಾಷ್ಟ್ರ ಗೌರವ ಸಲ್ಲಿಸುತ್ತಿದೆ. ಅವರು ತಮ್ಮ ಜೀವನದ ಪ್ರತಿ ಕ್ಷಣವನ್ನೂ ಏಕ್​ ಭಾರತ್​, ಶ್ರೇಷ್ಠ ಭಾರತಕ್ಕಾಗಿ ಮುಡಿಪಾಗಿಟ್ಟಿದದರು. ಇವತ್ತಿಗೂ ಕೋಟ್ಯಂತರ ಭಾರತೀಯರ ಹೃದಯದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಸಚಿವರಾದ ನಿತಿನ್​ ಗಡ್ಕರಿ, ರಾಜನಾಥ್​ ಸಿಂಗ್​ ಮತ್ತಿತರ ಗಣ್ಯರು ಕೂಡ ಸರ್ದಾರ್​ ವಲ್ಲಭಭಾಯಿ ಅವರಿಗೆ ಟ್ವೀಟ್​ ಮೂಲಕ ಗೌರವ ಸಲ್ಲಿಸಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್​ ಜನ್ಮದಿನ ಕಾರ್ಯಕ್ರಮವನ್ನು ಇಂದು ಗುಜರಾತ್​ನ ಕೇವಾಡಿಯಾದಲ್ಲಿರುವ 182 ಮೀಟರ್​ ಎತ್ತರದ ಏಕತಾ ಪ್ರತಿಮೆ ಸಮೀಪವೇ ನಡೆಸಲಾಗುವುದು. ಈ ಮೊದಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಗುಜರಾತ್​ ಮುಖ್ಯಮಂತ್ರಿ ಕಚೇರಿ ತಿಳಿಸಿತ್ತು. ಆದರೆ ಅವರು ರೋಮ್​ನಲ್ಲಿ ಇರುವ ಕಾರಣ ಅಮಿತ್​ ಶಾ ಆಗಮಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT