ದೇಶ

ಜಿ20 ಶೃಂಗಸಭೆ ಬಳಿಕ ಗ್ಲಾಸ್ಗೋಗೆ ತೆರಳಿ ಪ್ರಧಾನಿ ಮೋದಿ, ಜರ್ಮನ್ ಚಾನ್ಸೆಲರ್ ರೊಂದಿಗೆ ಮಹತ್ವದ ಭೇಟಿ

Srinivasamurthy VN

ಗ್ಲಾಸ್ಗೋ: ಜಿ20 ಶೃಂಗಸಭೆ ನಿಮಿತ್ತ ರೋಮ್ ಗೆ ತೆರಳಿದ್ದ ಪ್ರಧಾನಿ ಮೋದಿ 3 ದಿನಗಳ ಪ್ರವಾಸದ ಬಳಿಕ ಇದೀಗ ಬ್ರಿಟನ್ ಗೆ ತೆರಳಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಹಲವು ವಿಶ್ವ ನಾಯಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಜಿ20 ಶೃಂಗಸಭೆ ನಡುವಲ್ಲೇ ಪ್ರಧಾನಿ ಮೋದಿ ಅವರು ಇಂದು ಜರ್ಮನ್ ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಅವರನ್ನು ಭೇಟಿ ಮಾಡಿದ್ದು, ಉಭಯ ನಾಯಕರು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಗಾಢವಾಗಿಸಲು ಪ್ರತಿಜ್ಞೆ ಮಾಡಿದರು. ಪ್ರಧಾನಿ ಮೋದಿ ಭಾರತಕ್ಕೆ ಭೇಟಿ ನೀಡುವಂತೆ ಡಾ ಮಾರ್ಕೆಲ್ ಅವರನ್ನು ಆಹ್ವಾನಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಗ್ಲಾಸ್ಗೊದಲ್ಲಿ ಮೋದಿ, ಬ್ರಿಟನ್‌ ಪ್ರಧಾನಿ ಜತೆ ಮಾತುಕತೆ
ಇನ್ನು ಜಿ20 ಶೃಂಗಸಭೆ ಬಳಿಕ ಗ್ಲಾಸ್ಗೋ ತೆರಳಲಿರುವ ಪ್ರಧಾನಿ ಮೋದಿ 2 ದಿನ ಅಲ್ಲಿಯೇ ಉಳಿದುಕೊಳ್ಳಲ್ಲಿದ್ದಾರೆ. ನವೆಂಬರ್ 1 ಮತ್ತು 2 ರಂದು ಗ್ಲ್ಯಾಸ್ಗೋದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಗ್ಲಾಸ್ಗೊದಲ್ಲಿ ಪ್ರಧಾನಿ ಮೋದಿ ಅವರು 120ಕ್ಕೂ ಹೆಚ್ಚು ರಾಷ್ಟ್ರಗಳ ನಾಯಕರು ನಡೆಸುವ ಚರ್ಚೆಯಲ್ಲಿ ಭಾಗಿಯಾಗುವರು. ಬ್ರಿಟನ್‌ನಲ್ಲಿ ಮೂರು ದಿನಗಳವರೆಗೆ ಅಂದರೆ ಮಂಗಳವಾರದವರೆಗೆ ಪ್ರವಾಸ ಕೈಗೊಳ್ಳುವ ಅವರು ಸಿಒಪಿ 26 ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವರು. ಸೋಮವಾರ ಮಧ್ಯಾಹ್ನ ಅವರು ಭಾರತದ ಹವಾಮಾನ ಕ್ರಿಯಾ ಯೋಜನೆ ಕುರಿತು ಹೇಳಿಕೆ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

SCROLL FOR NEXT