ದೇಶ

ಉತ್ತರ ಪ್ರದೇಶ: ಡೆಂಘೀ, ವೈರಾಣು ಜ್ವರದಿಂದ ಮೃತರ ಸಂಖ್ಯೆ 50ಕ್ಕೆ ಏರಿಕೆ

Nagaraja AB

ಲಖನೌ: ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಡೆಂಘೀ ಹಾಗೂ ವೈರಾಣು ಜ್ವರದಿಂದ ಮೃತರ ಸಂಖ್ಯೆ ಶುಕ್ರವಾರ 50ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಜಿಲ್ಲೆಯ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಫಿರೋಜಾಬಾದ್‌ನಲ್ಲಿ ಮೂರು ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ. 

ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ,ರೋಗದ ಎಲ್ಲಾ ಅಂಶಗಳನ್ನು ಪರಿಶೀಲಿಸಲು  ಕೇಂದ್ರ ಆರೋಗ್ಯ ಸಚಿವಾಲಯದ ಆರು ಸದಸ್ಯರ ತಂಡ ಫಿರೋಜಾಬಾದ್‌ಗೆ ಆಗಮಿಸಿರುವುದಾಗಿ ಆಗ್ರಾ ಆರೋಗ್ಯ ವಿಭಾಗದ ಹೆಚ್ಚುವರಿ ನಿರ್ದೇಶಕ ಎ.ಕೆ. ಸಿಂಗ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಡಿಪಾರ್ಟ್ ಮೆಂಟ್ ಆಫ್ ನ್ಯಾಷನಲ್ ಸೆಂಟರ್ ಫಾರ್ ಡೀಸಿಸ್ ಕಟ್ರೋಲ್ ನಿಂದ ತುಷಾರ್ ಎನ್ ನಾಲೆ ನೇತೃತ್ವದಲ್ಲಿನ ಕೇಂದ್ರಿಯ ವೈದ್ಯಕೀಯ ತಂಡ ಪರಿಸ್ಥಿತಿ ಪರಿಶೀಲನೆಗಾಗಿ ಆಗಮಿಸಿರುವುದಾಗಿ ಫಿರೋಜಾಬಾದ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಅಲೋಕ್ ಕುಮಾರ್ ಶರ್ಮಾ ಹೇಳಿದ್ದಾರೆ.

ಕೇಂದ್ರಿಯ ತಂಡ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪತ್ರಗಳನ್ನು ಸಂಗ್ರಹಿಸುವುದರೊಂದಿಗೆ ಪ್ರಾಥಮಿಕ ಮಾದರಿಗಳು ಮತ್ತು ಇತರ ವಿಷಯಗಳ ಬಗ್ಗೆ ಆಳವಾದ ತನಿಖೆ ನಡೆಸುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಸಂಗೀತಾ ಅನೇಜಾ ತಿಳಿಸಿದ್ದಾರೆ.

SCROLL FOR NEXT