ಪ್ರಧಾನಿ ಮೋದಿ 
ದೇಶ

ಶಿಕ್ಷಕ್ ಪರ್ವ್ ಸಮಾವೇಶ: ಕೋವಿಡ್ ಸಾಂಕ್ರಾಮಿಕದ ನಡುವೆಯೂ ಕರ್ತವ್ಯ, ಶಿಕ್ಷಕರ ಕೊಂಡಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ "ಶಿಕ್ಷಕ್ ಪರ್ವ್" ಸಮಾವೇಶ ಉದ್ಘಾಟಿಸಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ನಡುವಲ್ಲೂ ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿರುವ ಶಿಕ್ಷಕರನ್ನು ಇದೇ ವೇಳೆ ಶ್ಲಾಘಿಸಿದ್ದಾರೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ "ಶಿಕ್ಷಕ್ ಪರ್ವ್" ಸಮಾವೇಶ ಉದ್ಘಾಟಿಸಿದ್ದು, ಕೋವಿಡ್ ಸಾಂಕ್ರಾಮಿಕ ರೋಗ ನಡುವಲ್ಲೂ ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿರುವ ಶಿಕ್ಷಕರನ್ನು ಇದೇ ವೇಳೆ ಶ್ಲಾಘಿಸಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶವನ್ನು ಪ್ರಧಾನಿ ಮೋದಿಯವರು ಇಂದು ಉದ್ಘಾಟಿಸಿದರು. ಈ ಮೂಲಕ ಇಂದಿನಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಉಪಕ್ರಮಗಳನ್ನು ಆರಂಭಿಸಿದ್ದಾರೆ. 

ಭಾರತೀಯ ಸಂಕೇತ ಭಾಷಾ ಶಬ್ದಕೋಶ-ಇದು ಶ್ರವಣದೋಷವುಳ್ಳವರಿಗೆ ಆಡಿಯೋ ಮತ್ತು ಸಾಂಕೇತಿಕ ಭಾಷಾ ವಿಡಿಯೋ), ದೃಷ್ಟಿಹೀನರಿಗೆ ಆಡಿಯೋ ಬುಕ್ಸ್ (ಸಿಬಿಎಸ್‌ಇ)ಅನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಕೋವಿಡ್ ಬಿಕ್ಕಟ್ಟಿನ ನಡುವೆಯೂ ನೀವು ಕೆಲಸ ನಿರ್ವಹಿಸಿದ್ದೀರಿ. ನಿಮ್ಮ ಶ್ರಮ ಶ್ಲಾಘನೀಯ ಎಂದು ತಿಳಿಸಿದರು. 

ಗುಣಮಟ್ಟ ಮತ್ತು ಸುಸ್ಥಿರ ಶಾಲೆಗಳು. ಭಾರತದ ಶಾಲೆಗಳಿಂದ ಕಲಿಕೆ’ ಎಂಬುದಾಗಿದೆ. ಇಂದು ಆರಂಭಿಸಿದ ಉಪಕ್ರಮಗಳು ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತವೆ. ಒಂದು ಉಪಕ್ರಮ, ಶಾಲೆಯ ಗುಣಮಟ್ಟದ ಮೌಲ್ಯಮಾಪನ ಮತ್ತು ಭರವಸೆ ಶಿಕ್ಷಣವನ್ನು ಸ್ಪರ್ಧಾತ್ಮಕವಾಗಿಸುವುದು ಮಾತ್ರವಲ್ಲದೇ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧವಾಗಿಸುತ್ತದೆ ಎಂದು ತಿಳಿಸಿದರು. 

ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿಯೂ ಮಾತನಾಡಿರುವ ಅವರು, ಎನ್​ಇಪಿ ರಚನೆಯಿಂದ ಅನುಷ್ಠಾನದವರೆಗೆ, ಪ್ರತಿ ಹಂತದಲ್ಲೂ ಶಿಕ್ಷಣ ತಜ್ಞರು, ತಜ್ಞರು ಹಾಗೂ ಶಿಕ್ಷಕರ ಕೊಡುಗೆ ಪ್ರಶಂಸನೀಯವಾದುದು. ಈಗ ನಾವು ಈ ಭಾಗವಹಿಸುವಿಕೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ನಾವು ಅದರಲ್ಲಿ ಸಮಾಜವನ್ನೂ ಕೂಡ ಒಳಗೊಳ್ಳುವಂತೆ ಮಾಡಬೇಕು ಎಂದರು.

ವಿದ್ಯಾಂಜಲಿ 2.0 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ನೊಂದಿಗೆ ದೇಶದ 'ಸಬ್ಕಾ ಪ್ರಯಾಸ'ದ ಸಂಕಲ್ಪಕ್ಕೆ ವೇದಿಕೆಯಾಗಲಿದೆ ಎಂದು ಹೇಳಿದರು. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಖಾಸಗಿ ವಲಯದವರು ಮುಂದಾಗಬೇಕು ಮತ್ತು ಕೊಡುಗೆ ನೀಡಬೇಕೆಂದು ಎಂದು ತಿಳಿಸಿದರು. 

ನ್ಯಾಷನಲ್ ಡಿಜಿಟಲ್ ಎಜುಕೇಷನಲ್ ಆರ್ಕಿಟೆಕ್ಚರ್ ಶಿಕ್ಷಣದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಆಧುನಿಕವಾಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ, "ಯುಪಿಐ ಇಂಟರ್ಫೇಸ್ ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದಂತೆ, ಎನ್-ಡಿಯರ್ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ನಡುವೆ ಸೂಪರ್ ಕನೆಕ್ಟ್ ಆಗಿ ಕಾರ್ಯನಿರ್ವಹಿಸುತ್ತದೆ. 

ನಮ್ಮ ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ವೃತ್ತಿಯಂತೆ ಪರಿಗಣಿಸುವುದಿಲ್ಲ, ಅವರಿಗೆ ಕಲಿಸುವುದು ಒಂದು ಮಾನವೀಯ ಭಾವನೆಯಾಗಿದೆ ಹಾಗೂ ಪವಿತ್ರ ನೈತಿಕ ಕರ್ತವ್ಯ. ಅದಕ್ಕಾಗಿಯೇ, ನಾವು ಶಿಕ್ಷಕ ಮತ್ತು ಮಕ್ಕಳ ನಡುವೆ ವೃತ್ತಿಪರ ಸಂಬಂಧವನ್ನು ನೋಡಿಲ್ಲ, ಅಲ್ಲಿ ಒಂದು ಕುಟುಂಬದ ಸಂಬಂಧವನ್ನು ಕಾಣುತ್ತೇವೆ.  ಈ ಸಂಬಂಧ, ಈ ಸಂಬಂಧವು ಕೇವಲ ಒಂದು ಘಳಿಗೆಗೆ ಅಲ್ಲ, ಇಡೀ ಜೀವನಕ್ಕಾಗಿ. ಡಿಜಿಟಲ್ ಶಿಕ್ಷಣದ ಮೂಲಕ ದೇಶವು ಮುಂದುವರೆಯುತ್ತಿದೆಯ ಮಾತನಾಡುವ ಪುಸ್ತಕಗಳು ಮತ್ತು ಆಡಿಯೋ ಪುಸ್ತಕಗಳಂತಹ ತಂತ್ರಜ್ಞಾನವನ್ನು ದೇಶವು ಶಿಕ್ಷಣದ ಒಂದು ಭಾಗವಾಗಿಸುತ್ತಿದೆ. ಶಿಕ್ಷಣವು ಕೇವಲ ಒಳಗೊಳ್ಳುವಿಕೆಯಾಗಿರದೆ ಸಮನಾಗಿರಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT