ದೇಶ

ತಮಿಳುನಾಡಿನ ಸರ್ಕಾರಿ ನೌಕರರು, ಪಿಂಚಣಿದಾರರು, ಶಿಕ್ಷಕರಿಗೆ ತುಟಿಭತ್ಯೆ ಹೆಚ್ಚಳದೊಂದಿಗೆ ಹಲವು ಕಲ್ಯಾಣ ಕಾರ್ಯಕ್ರಮ: ಸ್ಟಾಲಿನ್

Nagaraja AB

ಚೆನ್ನೈ: ತಮಿಳುನಾಡಿನ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಶಿಕ್ಷಕರಿಗೆ ಡಿಎ (ತುಟಿಭತ್ಯೆ) ಹೆಚ್ಚಳ ಸೇರಿದಂತೆ ಹಲವು ಕಲ್ಯಾಣ ಕ್ರಮಗಳನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಂಗಳವಾರ ಪ್ರಕಟಿಸಿದ್ದಾರೆ. ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.  

ತುಟಿಭತ್ಯೆ ಹೆಚ್ಚಳನ್ನು ಕೂಡಲೇ ಜಾರಿಗೆ ತರಬೇಕು ಎಂದು ಸರ್ಕಾರಿ ನೌಕರರ ಯೂನಿಯನ್ ಗಳು ಒತ್ತಾಯಿಸಿದ್ದವು. ಪಿಂಚಣಿದಾರರು ಕೂಡಾ ಇದೇ ಬೇಡಿಕೆ ಮುಂದಿಟ್ಟು ಇತ್ತೀಚಿಗೆ ಪ್ರತಿಭಟನೆ ನಡೆಸಿದ್ದರು.

ಏಪ್ರಿಲ್ 1 ಬದಲಿಗೆ ಜನವರಿ 1, 2022 ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟಿಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯ ಆಸೆಂಬ್ಲಿಯಲ್ಲಿ ಪ್ರಕಟಿಸಿದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ  1,620 ಕೋಟಿಯಷ್ಟು ಹೆಚ್ಚುವರಿ ವೆಚ್ಚ ತಗುಲಿದ್ದು, 16 ಲಕ್ಷ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ನಿವೃತ್ತಿಯ ದಿನದಂದು ಸರ್ಕಾರಿ ನೌಕರನನ್ನು ಅಮಾನತುಗೊಳಿಸುವ ಅಭ್ಯಾಸವನ್ನು ತಡೆಯುವ ಮತ್ತೊಂದು ಘೋಷಣೆಯನ್ನು ಸ್ಟಾಲಿನ್ ಇದೇ ವೇಳೆ ಮಾಡಿದರು. ಮುಖ್ಯಮಂತ್ರಿ ಘೋಷಣೆಯನ್ನು ತಮಿಳುನಾಡು ಸರ್ಕಾರಿ ನೌಕರ ಸಂಘ ಸ್ವಾಗತಿ ರುವುದಾಗಿ ಸಂಘದ ಅಧ್ಯಕ್ಷ ಎಂ. ಅಂಬಾರಸು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಸ್ಟಾಲಿನ್ ಮಾಡಿರುವ ಪ್ರಮುಖ ಕಲ್ಯಾಣ ಕ್ರಮಗಳು ಇಂತಿವೆ.

* ಜನವರಿ 1, 2022 ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟಿಭತ್ಯೆ ಹೆಚ್ಚಳ

* ಪೌಷ್ಟಿಕ ಆಹಾರ ಯೋಜನೆಯ ಅಡುಗೆಯವರು, ಸಹಾಯಕ ಅಡುಗೆಯವರ ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಕೆ

* ತಮಿಳುನಾಡು ಲೋಕಸೇವಾ ಆಯೋಗದ ಮೂಲಕ ಸರ್ಕಾರಿ ಶಾಲೆಯಲ್ಲಿನ ಕಿರಿಯ ಸಹಾಯಕರ ಹುದ್ದೆಗೆ ಶೀಘ್ರ ಭರ್ತಿಗೆ ಕ್ರಮ

* ನಿವೃತ್ತಿ ದಿನದಂದು ಅಮಾನತು ಆದೇಶಕ್ಕೆ ಕಡಿವಾಣ

* ಹಿಂದಿನ ಎಐಎಡಿಎಂಕೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಶಿಕ್ಷಕರ ವಿರುದ್ಧದ ಶಿಸ್ತು ಕ್ರಮ ಪ್ರಕ್ರಿಯೆ ಹಿಂದಕ್ಕೆ

* ವಿದ್ಯುತ್ ನಿಂದ ಸಾಯುವ ಸರ್ಕಾರಿ ನೌಕರರ ಕಾನೂನು ಉತ್ತರಾಧಿಕಾರಿಗಳನ್ನು ನೇಮಿಸಲು ಸೂಕ್ತ ಮಾರ್ಗಸೂಚಿಗಳನ್ನು ನೀಡಲಾಗುವುದು.

* ಎಲ್ಲಾ ವಯಸ್ಸಿನ ಸರ್ಕಾರಿ ನೌಕರರ ಮಕ್ಕಳು ಆರೋಗ್ಯ ವಿಮಾ ಯೋಜನೆಯ ಅನುಕೂಲ ಪಡೆಯಲು ಆದೇಶ 

* ಆರೋಗ್ಯ ವಿಮಾ ಯೋಜನೆಯಡಿ ಸರ್ಕಾರಿ ನೌಕರರಿಗೆ  ಕೋವಿಡ್-19 ಚಿಕಿತ್ಸೆಗಾಗಿ 10 ಲಕ್ಷಕ್ಕೂ ಹೆಚ್ಚು ವೆಚ್ಚಕ್ಕೆ ಅವಕಾಶ 

* ಹೊಸದಾಗಿ ನೇಮಕವಾದ ಸರ್ಕಾರಿ ನೌಕರರಿಗೆ ಅವರು ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಗಳಲ್ಲಿಯೇ ತರಬೇತಿ

* ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರ ಅನುಪಾತಡಿ ಶಿಕ್ಷಕರ ನೇಮಕಕ್ಕೆ ಕ್ರಮ ಮತ್ತಿತರ ಕಲ್ಯಾಣ ಕ್ರಮಗಳನ್ನು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದರು. 

SCROLL FOR NEXT