ಸುಪ್ರೀಂ ಕೋರ್ಟ್ 
ದೇಶ

ಕರ್ನಾಟಕ ಹೈಕೋರ್ಟ್ ಗೆ ಖಾಯಂ ನ್ಯಾಯಾಧೀಶರ ನೇಮಕಕ್ಕೆ ಕೊಲಿಜಿಯಂ ನಿಂದ 10 ಹೆಸರು ಶಿಫಾರಸು

12 ಹೈಕೋರ್ಟ್ ಗಳಿಗೆ 68 ಖಾಯಂ ನ್ಯಾಯಾಧೀಶರ ನೇಮಕ ಮಾಡುವ ಐತಿಹಾಸಿನ ನಿರ್ಧಾರ ತೆಗೆದುಕೊಳ್ಳಲಿರುವ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಕರ್ನಾಟಕದ ಹೈಕೋರ್ಟ್ ನ ಖಾಯಂ ನ್ಯಾಯಾಧೀಶರ ನೇಮಕಕ್ಕೆ 10 ಹೆಸರುಗಳನ್ನು ಶಿಫಾರಸ್ಸು ಮಾಡಿದೆ.

ನವದೆಹಲಿ: 12 ಹೈಕೋರ್ಟ್ ಗಳಿಗೆ 68 ಖಾಯಂ ನ್ಯಾಯಾಧೀಶರ ನೇಮಕ ಮಾಡುವ ಐತಿಹಾಸಿನ ನಿರ್ಧಾರ ತೆಗೆದುಕೊಳ್ಳಲಿರುವ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಕರ್ನಾಟಕದ ಹೈಕೋರ್ಟ್ ನ ಖಾಯಂ ನ್ಯಾಯಾಧೀಶರ ನೇಮಕಕ್ಕೆ 10 ಹೆಸರುಗಳನ್ನು ಶಿಫಾರಸ್ಸು ಮಾಡಿ ಆದೇಶ ಹೊರಡಿಸಿದೆ.

ಸಿಜೆಐ ಎನ್ ವಿ ರಮಣ ಅವರ ನೇತೃತ್ವದ ಕೊಲಿಜಿಯಂ ಈ ಆದೇಶವನ್ನು ಹೊರಡಿಸಿದೆ. ನ್ಯಾಯಾಧೀಶರಾದ ಯುಯು ಲಲಿತ್ ಹಾಗೂ ಎಎಂ ಖಾನ್ವಾಲಿಕರ್ ಅವರೂ ಕೊಲಿಜಿಯಂ ಸದಸ್ಯರಾಗಿದ್ದು  ಕೇರಳ ಹೈಕೋರ್ಟ್ ಗೆ ಇಬ್ಬರು ಹೆಚ್ಚುವರಿ ನ್ಯಾಯಾಧೀಶರ-ನ್ಯಾ.ಎಂಆರ್ ಅನಿತಾ, ನ್ಯಾ.ಕೆ.ನಾಯರ್ ಹರಿಪಾಲ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಕೇಂದ್ರಕ್ಕೆ ಕಳಿಸಲಾಗಿರುವ ಶಿಫಾರಸ್ಸಿನಲ್ಲಿ ಮೂರು ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ಈ ಶಿಫಾರಸ್ಸನ್ನು ಒಪ್ಪಿಕೊಂಡ ಬಳಿಕ ಕರ್ನಾಟಕದ ಹೈಕೋರ್ಟ್ ಗೆ 10 ನ್ಯಾಯಾಧೀಶರ ಖಾಯಂ ನೇಮಕಗೊಳ್ಳಲಿದ್ದಾರೆ.

ನ್ಯಾಯಾಧೀಶರ ಪಟ್ಟಿ ಹೀಗಿದೆ...

1. ನ್ಯಾ.ಎಂ.ಗಣೇಶಯ್ಯ ಉಮಾ
2. ನ್ಯಾಯಾಧೀಶ ಶಿವಶಂಕರ್​ ಅಮರಣ್ಣವರ್​
3. ನ್ಯಾ.ಮರಲೂರ್​ ಇಂದ್ರಕುಮಾರ್ ಅರುಣ್​
4. ಜಸ್ಟೀಸ್​ ಹಂಚಾಟೆ ಸಂಜೀವ್​ಕುಮಾರ್​
5. ಜಸ್ಟೀಸ್​ ವೇದವ್ಯಾಸಾಚಾರ್​ ಶ್ರೀಶಾನಂದಾ
6. ನ್ಯಾ.ಪದ್ಮರಾಜ್​ ನೇಮಾಚಂದ್ರ ದೇಸಾಯಿ
7. ನ್ಯಾ.ರವಿ ವೆಂಕಪ್ಪ ಹೊಸ್ಮನಿ
8.ನ್ಯಾ. ಸವಣೂರ್​ ವಿಶ್ವಜಿತ್ ಶೆಟ್ಟಿ
9. ಜಸ್ಟೀಸ್ ಪಿ.ಕೃಷ್ಣ ಭಟ್​
10. ಜಸ್ಟೀಸ್​ ಎಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್​

ತುರ್ತಾಗಿ ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಸ್ಥಾನವನ್ನು ತುಂಬುವುದಕ್ಕಾಗಿ ಸುಪ್ರೀಂ ಕೋರ್ಟ್ ಈ ಹೆಸರುಗಳನ್ನು ಶಿಫಾರಸ್ಸು ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT