ದೇಶ

ಕೊರೊನಾ ಸಾಂಕ್ರಾಮಿಕ: ಬಡ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಶುಲ್ಕ ರಿಯಾಯಿತಿ ಘೋಷಿಸಿದ ದೆಹಲಿ ಕಾಲೇಜು

Harshavardhan M

ನವದೆಹಲಿ: ದೆಹಲಿ ವಿವಿಯ ರಾಜಧಾನಿ ಕಾಲೇಜು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೆಲ್ಲರ ಕಾಲೇಜು ಶುಲ್ಕವನ್ನು ಶೇ.20ರಷ್ಟು ಕಡಿತಗೊಳಿಸಿದೆ. 

ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರಿಯಾದ ಆದಾಯ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆಯೆಂದು ಆಡಳಿತ ಮಂಡಳಿ ತಿಳಿಸಿದೆ.

ಕೊರೊನಾ ಸೋಂಕಿಗೆ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಶೇ.100 ಶುಲ್ಕ ರಿಯಾಯಿತಿ ಘೋಷಿಸಿದೆ ಎನ್ನುವುದು ವಿಶೇಷ. ಕಾಲೇಜಿನ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಸಲುವಾಗಿಯೇ ಕಾಲೇಜಿನಲ್ಲಿ ದತ್ತಿ ನಿಧಿಯೊಂದನ್ನು ಸ್ಥಾಪಿಸಲಾಗಿದೆ.

SCROLL FOR NEXT