ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ 
ದೇಶ

ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆ 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮತಿ

ಕೋವಿಡ್-19 ಸೋಂಕಿನ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌ ಲೈಟ್ ಸಿಂಗಲ್ ಡೋಸ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಕೋವಿಡ್-19 ಸೋಂಕಿನ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌ ಲೈಟ್ ಸಿಂಗಲ್ ಡೋಸ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ಸ್ಪುಟ್ನಿಕ್ ಲೈಟ್ ಕೋವಿಡ್ ವಿರುದ್ಧ ಶೇ 78.6ರಿಂದ ಶೇ 83.7ರಷ್ಟು ಪರಿಣಾಮಕಾರಿಯಾಗಿದೆ ಎಂಬ ಅಧ್ಯಯನ ವರದಿ ಇತ್ತೀಚೆಗೆ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಡಿಸಿಜಿಐ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆ ಬಳಕೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಜುಲೈ 30 ರಂದು ನಡೆದ ವಿಷಯ ತಜ್ಞರ ಸಮಿತಿ ಸಭೆಯ ಶಿಫಾರಸ್ಸಿನ ಪ್ರಕಾರ, ಸ್ಪುಟ್ನಿಕ್ -ಲೈಟ್ ಕೂಡಾ ಸ್ಪುಟ್ನಿಕ್ ವಿ ಅಂಶಗಳನ್ನು ಹೊಂದಿದ್ದು, ಸುರಕ್ಷಿತವಾಗಿದೆ ಎನ್ನಲಾಗಿದೆ. ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಕೇಂದ್ರೀಯ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆಯ ವೆಬ್ ಸೈಟ್ ನಲ್ಲಿ ಅಳವಡಿಸಲಾಗಿತ್ತು. ಸ್ಪುಟ್ನಿಕ್ -ಲೈಟ್ ಲಸಿಕೆಯ ಮಾರುಕಟ್ಟೆಗೆ ಅನುಮತಿ ಕೋರಿ ಡಿಸಿಜಿಐಗೆ ಪ್ರಸ್ತಾವನೆ ಸಲ್ಲಿಸಿದ್ದ ಡಾ ರೆಡ್ಡೀಸ್ ಲ್ಯಾಬೋರೇಟರೀಸ್, ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುವ ಪ್ರೋಟೋಕಾಲ್ ಅನ್ನು ಸಮಿತಿಯ ಮುಂದೆ ಮಂಡಿಸಿತ್ತು. ಸ್ಪುಟ್ನಿಕ್ ವಿ (ಅಂದರೆ, ಸ್ಪುಟ್ನಿಕ್-ಲೈಟ್) ನ ಮೊದಲ-ಡೋಸ್ ಅಂಶ ಕುರಿತು ದೇಶದಲ್ಲಿ ಈಗಾಗಲೇ ಡಾ. ರೆಡ್ಡೀಸ್ ಲ್ಯಾಬೋರೆಟರಿ ನೀಡಿರುವ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ಗಮನದಲ್ಲಿಟ್ಟುಕೊಂಡು, ಪ್ರತ್ಯೇಕ ಮೂರನೇ ಹಂತದ ಪ್ರಯೋಗ ಅಗತ್ಯವಿಲ್ಲ ಎಂದು ವಿಶೇಷ ತಜ್ಞರ ಸಮಿತಿ ತಿಳಿಸಿತ್ತು. ಇದೀಗ ತುರ್ತು ಬಳಕೆಗೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ಸ್ಪುಟ್ನಿಕ್ ಲೈಟ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲು ಡಿಸಿಜಿಐ ತಜ್ಞರ ಸಮಿತಿ ಜುಲೈನಲ್ಲಿ ನಿರಾಕರಿಸಿತ್ತು.

ಇನ್ನು ಸ್ಪುಟ್ಮಿಕ್ ಲೈಟ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗಾಗಿ ಅರ್ಜೆಂಟೀನಾದಲ್ಲಿ 40,000 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಡಿಮೆ ಮಾಡುವಲ್ಲಿ ಸ್ಪುಟ್ನಿಕ್ ಲೈಟ್ ಶೇ 82.1ರಿಂದ ಶೇ 87.6ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದುಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel