ಶಶಿ ತರೂರ್ ಮತ್ತು ಪ್ರಿಯಾಂಕಾ ಚತುರ್ವೇದಿ 
ದೇಶ

ಸಂಸದ್ ಟಿವಿಗಾಗಿ ಸಂದರ್ಶಕರಾಗಿ ಬದಲಾದ ಶಶಿ ತರೂರ್, ಪ್ರಿಯಾಂಕಾ ಚತುರ್ವೇದಿ!

ವಿರೋಧ ಪಕ್ಷದ ಸಂಸದರಾದ ಶಶಿ ತರೂರ್ ಮತ್ತು ಪ್ರಿಯಾಂಕಾ ಚತುರ್ವೇದಿ ಅವರು ಹೊಸದಾಗಿ ಆರಂಭಿಸಿದ ಸಂಸದ್ ಟಿವಿಯಲ್ಲಿ ತಮ್ಮದೇ ಕಾರ್ಯಕ್ರಮಗಳಿಗೆ ಸಂದರ್ಶಕರಾಗಿ ಬದಲಾಗಲಿದ್ದಾರೆ.

ನವದೆಹಲಿ: ವಿರೋಧ ಪಕ್ಷದ ಸಂಸದರಾದ ಶಶಿ ತರೂರ್ ಮತ್ತು ಪ್ರಿಯಾಂಕಾ ಚತುರ್ವೇದಿ ಅವರು ಹೊಸದಾಗಿ ಆರಂಭಿಸಿದ ಸಂಸದ್ ಟಿವಿಯಲ್ಲಿ ತಮ್ಮದೇ ಕಾರ್ಯಕ್ರಮಗಳಿಗೆ ಸಂದರ್ಶಕರಾಗಿ ಬದಲಾಗಲಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್ ಅವರು "ಟು ದಿ ಪಾಯಿಂಟ್" ಕಾರ್ಯಕ್ರಮ ನಡೆಸಿಕೊಟ್ಟರೆ ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಅವರು "ಮೇರಿ ಕಹಾನಿ" ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಇಬ್ಬರೂ ನಾಯಕರು ಇಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರೇ ಪ್ರಶ್ನೆಗಳನ್ನು ಮುಂದಿಡಲಿದ್ದಾರೆ.

ತರೂರ್ ಅವರ ಕಾರ್ಯಕ್ರಮವು ಖ್ಯಾತನಾಮರೊಂದಿಗಿನ ಪ್ರಾಮಾಣಿಕ ಸಂಭಾಷಣೆಗಳಾಗಿದ್ದರೆ, ಚತುರ್ವೇದಿಯವರ ಕಾರ್ಯಕ್ರಮದಲ್ಲಿ ಮಹಿಳಾ ಸಂಸದರು ತಮ್ಮ ಪ್ರಯಾಣವನ್ನು ಹಂಚಿಕೊಳ್ಳುತ್ತಾರೆ.

"ಟು ದಿ ಪಾಯಿಂಟ್" ಖ್ಯಾತ ವ್ಯಕ್ತಿಗಳ ಸಂದರ್ಶನಗಳ ಸರಣಿಯಾಗಿದ್ದು, ಚತುರ್ವೇದಿ ಅವರು ಮೆರಿ ಕಹಾನಿಯಲ್ಲಿ ಮಹಿಳಾ ಸಂಸತ್ ಸದಸ್ಯರನ್ನು ಸಂದರ್ಶಿಸುತ್ತಾರೆ. ಆದಾಗ್ಯೂ, ಎರಡೂ ಪ್ರದರ್ಶನಗಳು ರಾಜಕೀಯದಿಂದ ದೂರವಿರುತ್ತವೆ.
"ನಾನು ನಟ ಮೈಕೆಲ್ ಡೌಗ್ಲಸ್ ಮತ್ತು ಇತರ ಒಂದೆರಡು ಜನರನ್ನು ವಿಶ್ವಸಂಸ್ಥೆಯ ಟಿವಿಗಾಗಿ ಸಂದರ್ಶಿಸಿದ್ದೇನೆ, ಹಾಗಾಗಿ ನಾನು ಆಂಕರ್ ಆಗಿ ಸಂಪೂರ್ಣವಾಗಿ ಅನನುಭವಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದರೆ ನಾನು ಅವರಿಗೆ ಉತ್ತರಿಸುವ ಬದಲು ಪ್ರಶ್ನೆಗಳನ್ನು ಕೇಳುವುದು ಒಂದು ರಿಫ್ರೆಶ್ ಬದಲಾವಣೆ!" ಎಂದು ಶಶಿ ತರೂರ್ ಪಿಟಿಐಗೆ ತಿಳಿಸಿದ್ದಾರೆ.

"ಇದು ಆಸಕ್ತಿದಾಯಕ ಸ್ಥಳವಾಗಿದೆ. ಅತಿಥಿಗಳಿಂದ ನಿಮಗೆ ಬೇಕಾದ ಪ್ರಶ್ನೆಗಳನ್ನು ನೀವು ಕೇಳಬಹುದು" ಎಂದು ಚತುರ್ವೇದಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT