ದೇಶ

ಸಾಕ್ಷರತಾ ನಾಡಲ್ಲಿ ಬಾಲ್ಯವಿವಾಹ: ಬಾಲಕಿಯ ಪತಿ, ಪೋಷಕರ ವಿರುದ್ಧ ದೂರು ದಾಖಲು 

Nagaraja AB

ಮಲಪ್ಪುರಂ: ದೇಶದಲ್ಲಿ ಅತಿ ಹೆಚ್ಚು ಸಾಕ್ಷರತಾ ಪ್ರಮಾಣ ಹೊಂದಿರುವ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆ 25 ವರ್ಷದ ಪುರುಷನೊಂದಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹ ವರದಿಯಾಗಿದ್ದು, ಬಾಲಕಿಯ ಪತಿ, ಪೋಷಕರು ಸೇರಿದಂತೆ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಅಪ್ರಾಪ್ತ ವಯಸ್ಸಿನ ಬಾಲಕಿ ಹಾಗೂ ಆಕೆಯನ್ನು ವಿವಾಹವಾದ ವ್ಯಕ್ತಿ ಇಬ್ಬರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮದುವೆಗೆ ಸಹಕರಿಸಿದ್ದ ಬಾಲಕಿಯ ಪತಿ, ಹಾಗೂ ಆಕೆಯ ಪೋಷಕರು ಸೇರಿದಂತೆ ಮತ್ತಿತರರ ವಿರುದ್ಧ ಕುರುವರಕುಂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆಚ್ ಎಸ್ ಒ ಮನೋಜ್ ಪರಯಟ್ಟ ಪಿಟಿಐಗೆ ಹೇಳಿದ್ದಾರೆ.

ಅಡುಗೆಯವರು, ವಿಡಿಯೋಗ್ರಾಫರ್, ಅತಿಥಿಗಳು ಸೇರಿದಂತೆ ಮದುವೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಮೇಲೂ ಬಾಲ್ಯ ವಿವಾಹ ಕಾಯ್ದೆ ನಿಷೇಧ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬಹುದಾಗಿದೆ. ಬಾಲ್ಯ ವಿವಾಹ  ಮಾಡಿದ್ದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಗರಿಷ್ಠ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವಾರದ ಹಿಂದೆಯೇ ಮದುವೆ ನಡೆದಿದ್ದು, ವಿವಿಧ ಇಲಾಖೆಗಳು ಹಾಗೂ ಪೊಲೀಸ್ ಜಂಟಿಯಾಗಿ ಪ್ರಾಥಮಿಕ ತನಿಖೆ ನಡೆಸಿದ ನಂತರ ಕೇಸ್ ದಾಖಲಿಸಲಾಗಿದೆ. ಪ್ರಸ್ತುತ ಬಾಲಕಿ ಆಕೆಯ ಪೋಷಕರೊಂದಿಗೆ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.  ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ, ಈ ವಿಚಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

SCROLL FOR NEXT