ಗುಜರಾತ್: 250 ಕೋಟಿ ರೂ. ಮೌಲ್ಯದ ಡ್ರಗ್ಸ್ ನೊಂದಿಗೆ ಇರಾನಿಯನ್ ಬೋಟ್ ಎಟಿಎಸ್ ವಶಕ್ಕೆ
ಗುಜರಾತ್ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಭಾರತೀಯ ಸಮುದ್ರದಲ್ಲಿ ಏಳು ಸಿಬ್ಬಂದಿ ಮತ್ತು ಭಾರೀ ಪ್ರಮಾಣದ ಹೆರಾಯಿನ್ ಹೊಂದಿದ್ದ ಇರಾನಿಯನ್ ದೋಣಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಗಾಂಧಿನಗರ: ಗುಜರಾತ್ ಕರಾವಳಿ ಗಾರ್ಡ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಗುಜರಾತ್ ಕರಾವಳಿಯ ಭಾರತೀಯ ಸಮುದ್ರದಲ್ಲಿ ಏಳು ಸಿಬ್ಬಂದಿ ಮತ್ತು ಭಾರೀ ಪ್ರಮಾಣದ ಹೆರಾಯಿನ್ ಹೊಂದಿದ್ದ ಇರಾನಿಯನ್ ದೋಣಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ ಕಾರ್ಯಾಚರಣೆ ವೇಳೆಯಲ್ಲಿ ಬೋಟ್ ನ್ನು ವಶಕ್ಕೆ ಪಡೆಯಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 150 ರಿಂದ 250 ಕೋಟಿ ರೂ. ಮೌಲ್ಯದ ಅಂದಾಜು 30 ರಿಂದ 50 ಕೆಜಿಯಷ್ಟು ಡ್ರಗ್ಸ್ ನ್ನು ಸಾಗಟ ಮಾಡಲಾಗುತಿತ್ತು ಎಂದು ಅವರು ಹೇಳಿದ್ದಾರೆ. ಬೋಟ್ ನಲ್ಲಿದ್ದ ಎಲ್ಲಾ ಏಳು ಮಂದಿ ಇರಾನಿ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗಳಿಗಾಗಿ ಬೋಟ್ ನ್ನು ಹತ್ತಿರದ ಬಂದರಿಗೆ ತರಲಾಗಿದೆ"ಎಂದು ಗುಜರಾತ್ನ ರಕ್ಷಣಾ ಪಿಆರ್ಒ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಸಮುದ್ರ ಮಾರ್ಗವಾಗಿ ಹೆರಾಯಿನ್ ನ್ನು ಕಳ್ಳ ಸಾಗಣೆ ಬಗ್ಗೆ ದೊರೆತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಯಿತು ಎಂದು ಗುಜರಾತ್ ಎಟಿಎಸ್ ಡಿಐಜಿ ಹಿಮಾಂಶು ಶುಕ್ಲಾ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.