ರೋಹಿಂಗ್ಯ ನಿರಾಶ್ರಿತರು 
ದೇಶ

ಮ್ಯಾನ್ಮಾರ್ ನಿರಾಶ್ರಿತರು ದೇಶದ ಭದ್ರತೆಗೆ ಆಪತ್ತು: ಸರ್ಕಾರದ ಆತಂಕವನ್ನು ಒಪ್ಪದ ಎನ್ ಸಿಆರ್ ಬಿ ಡೇಟಾ

ದೇಶದ ಭದ್ರತೆಗೆ ಮ್ಯಾನ್ಮಾರ್ ನ ನಿರಾಶ್ರಿತರು ಅಪಾಯ ಎಂಬ ಸರ್ಕಾರದ ಆತಂಕವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಅಂಕಿ-ಅಂಶಗಳು ಬೆಂಬಲಿಸುತ್ತಿಲ್ಲ.

ನವದೆಹಲಿ: ಸರ್ಕಾರ ಮ್ಯಾನ್ಮಾರ್ ನಿರಾಶ್ರಿತರ ಬಗ್ಗೆ ನಿರಂತರವಾಗಿ ಆತಂಕ ವ್ಯಕ್ತಪಡಿಸುತ್ತಾ ಬಂದಿದೆ. ಆದರೆ ದೇಶದ ಭದ್ರತೆಗೆ ಮ್ಯಾನ್ಮಾರ್ ನ ನಿರಾಶ್ರಿತರು ಅಪಾಯ ಎಂಬ ಸರ್ಕಾರದ ಆತಂಕವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ಅಂಕಿ-ಅಂಶಗಳು ಬೆಂಬಲಿಸುತ್ತಿಲ್ಲ.

2020 ರ ಎನ್ ಸಿಆರ್ ಬಿ ವರದಿಯ ವಿಶ್ಲೇಷಣೆಯ ಪ್ರಕಾರ ಭಾರತದಲ್ಲಿ ವಿದೇಶಿ ಪ್ರಜೆಗಳು ಮಾಡುವ ಅಪರಾಧಗಳ ಪೈಕಿ ಶೇ.2 ಮ್ಯಾನ್ಮಾರ್ ಪ್ರಜೆಗಳ ಅಪರಾಧವಾಗಿರುತ್ತದೆ ಎಂದು ಹೇಳಿದೆ. 

ಭಯೋತ್ಪಾದನೆ, ಅತ್ಯಾಚಾರ, ಶಸ್ತ್ರಗಳನ್ನಿಟ್ಟುಕೊಳ್ಳುವುದು ಮುಂತಾದ ಅಪರಾಧ ಪ್ರಕರಾಣಗಳು 2020 ರಲ್ಲಿ ಮ್ಯಾನ್ಮಾರ್ ಪ್ರಜೆಗಳ ವಿರುದ್ಧ ದಾಖಲಾಗಿಲ್ಲ ಎಂಬ ಮಾಹಿತಿ ಎನ್ ಸಿಆರ್ ಬಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಮ್ಯಾನ್ಮಾರ್ ನಿರಾಶ್ರಿತರು ಎಸಗುವ ಅಪರಾಧ ಕೃತ್ಯಗಳಿಗಿಂತಲೂ ಬಾಂಗ್ಲಾದೇಶ, ನೈಜೀರಿಯಾ, ನೇಪಾಳದ ಪ್ರಜೆಗಳು ಭಾರತದಲ್ಲಿ ಎಸಗುವ ಅಪರಾಧ ಕೃತ್ಯಗಳು ಹೆಚ್ಚಾಗಿರಲಿದೆ ಎಂದು ಎನ್ ಸಿಆರ್ ಬಿ ವರದಿ ತಿಳಿಸಿದೆ.

2020 ರಲ್ಲಿ ಭಾರತದಲ್ಲಿ ಒಟ್ಟಾರೆ 7686  ವಿದೇಶಿ ಪ್ರಜೆಗಳು ಎಸಗಿದ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಮಂದಿ ಬಾಂಗ್ಲಾದೇಶಿಗರಾಗಿದ್ದು, (ಶೇ.25.4) ನೈಜೀರಿಯಾ (ಶೇ.5.5) ನೇಪಾಳ (ಶೇ.3.3) ಹಾಗೂ ಮ್ಯಾನ್ಮಾರ್ ನ ಮಂದಿ ಶೇ.2.3 ರಷ್ಟು ಇದ್ದಾರೆ ಎಂದು ವರದಿಯ ಮೂಲಕ ತಿಳಿದುಬಂದಿದೆ.

2019 ಕ್ಕೆ ಹೋಲಿಕೆ ಮಾಡಿದರೆ 2020 ರಲ್ಲಿ ವಿದೇಶಿಗರು ಎಸಗಿರುವ ಅಪರಾಧ ಕೃತ್ಯಗಳಲ್ಲಿ ಇಳಿಕೆ ಕಂಡುಬಂದಿದ್ದು ಕೋವಿಡ್-19 ಲಾಕ್ ಡೌನ್ ಹಾಗೂ ನಿರ್ಬಂಧಗಳು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT