ದೇಶ

ಮಾದಕ ವಸ್ತು ಜಿಹಾದ್: ಪಿಣರಾಯಿ ಸರ್ಕಾರದ ಬೆನ್ನಿಗೆ ನಿಂತ ಬಿಜೆಪಿ ಸಂಸದ, ನಟ ಸುರೇಶ್ ಗೋಪಿ; ಕಮಲ ಪಾಳಯಕ್ಕೆ ಮುಖಭಂಗ

Harshavardhan M

ತಿರುವನಂತಪುರಂ: ಕೇರಳ ಬಿಜೆಪಿ ಸಂಸದ ಸುರೇಶ್ ಗೋಪಿ, 'ಮಾದಕ ವಸ್ತು ಜಿಹಾದ್' (Narcotics Jihad) ಪ್ರಕರಣದಲ್ಲಿ ಎಲ್ ಡಿ ಎಫ್ ಸರ್ಕಾರವನ್ನು ಬೆಂಬಲಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. 

ಪತ್ರಕರ್ತರೊಡನೆ ಮಾತನಾಡುತ್ತಾ 'ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರತಿಯೊಂದು ವಿಷಯಕ್ಕೂ ಸ್ಪಷ್ಟನೆ ನೀಡಬೇಕಾದ ಅಗತ್ಯವಿಲ್ಲ' ಎಂದು ಸುರೇಶ್ ಗೋಪಿ ಹೇಳಿದ್ದರು. 

ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಅವರು ಕೇರಳ ರಾಜ್ಯ ಸರ್ಕಾರ ಮತ್ತು ಸಂಸತ್ತು ಪ್ರಕರಣವನ್ನು ಜಾಣ್ಮೆಯಿಂದ ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿ ಬಿಜೆಪಿ ಗೆ ತೀವ್ರ ಇರಿಸುಮುರಿಸು ಉಂಟುಮಾಡಿದ್ದರು.

ಬಿಜೆಪಿ ಹಿಂದಿನಿಂದಲೂ ಮಾದಕ ವಸ್ತು ಸಾಗಣೆ ಪ್ರಕರಣ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದೇ ಹೇಳುತ್ತಾ ಬಂದಿತ್ತು. ಕೇರಳ ಮಂತ್ರಿಗಳನ್ನು ಗುರಿಯಾಗಿಸಿ ಹಲವು ಬಾರಿ ಟೀಕೆ ಮಾಡಿತ್ತು. ಆದರೆ ಇದೀಗ ಅವರದೇ ಪಕ್ಷದ ಸಂಸದ ಕೇರಳ ರಾಜ್ಯ ಸರ್ಕಾರವನ್ನು ಬೆಂಬಲಿಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 

SCROLL FOR NEXT