ದೇಶ

ಪಿಎಂ ಕೇರ್ಸ್ ಫಂಡ್ ಭಾರತದ ಏಕೀಕೃತ ನಿಧಿಗೆ ಹೋಗಲ್ಲ; ದೆಹಲಿ ಹೈಕೋರ್ಟ್ ಗೆ ಕೇಂದ್ರ ಮಾಹಿತಿ

Nagaraja AB

ನವದೆಹಲಿ: ಪಿಎಂ ಕೇರ್ಸ್ ಫಂಡ್ ಭಾರತ ಸರ್ಕಾರದ ನಿಧಿಯಲ್ಲ, ಇದರಿಂದ ಸಂಗ್ರಹವಾದ ಹಣ ಭಾರತದ ಏಕೀಕೃತ ನಿಧಿಗೆ ಹೋಗಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಪಿಎಂ ಕೇರ್ ಟ್ರಸ್ಟ್ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಕಂಟ್ರೋಲರ್ ಮತ್ತು ಅಡಿಟರ್ ಜನರಲ್ ಆಫ್ ಇಂಡಿಯಾದ ಪ್ಯಾನಲ್ ನಿಂದ ಬಂದ ಚಾರ್ಟೆಡ್ ಅಕೌಂಟೆಟ್ ಒಬ್ಬರಿಂದ ಅದರ  ಹಣವನ್ನು ಪರಿಶೋಧಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಅಫಿಡವಿಟ್ ಒಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 

ಪಿಎಂ ಕೇರ್ಸ್ ನಿಧಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ಪಿಎಂ ಕೇರ್ಸ್ ನಿಧಿ 'ರಾಜ್ಯದು ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರಿದ್ದ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ನಿಗದಿಪಡಿಸಿದೆ.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು, ಲೆಕ್ಕಪರಿಶೋಧನೆಯ ವರದಿಯನ್ನು ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ್ತು ಟ್ರಸ್ಟ್ ಸ್ವೀಕರಿಸಿದ ನಿಧಿಯ ಬಳಕೆಯ ವಿವರಗಳೊಂದಿಗೆ ಸೇರಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಲಾಗಿದೆ.

SCROLL FOR NEXT