ದೇಶ

'ನಿಗದಿಯಂತೆ ಭವಾನಿಪುರ ಉಪ ಚುನಾವಣೆ': ಪಿಐಎಲ್ ವಜಾಗೊಳಿಸಿದ ಕೋಲ್ಕತಾ ಹೈಕೋರ್ಟ್

Srinivasamurthy VN

ಕೋಲ್ಕತಾ: ನಿಗದಿತ ವೇಳಾಪಟ್ಟಿಯಂತೆಯೇ ಭವಾನಿಪುರ ಉಪ ಚುನಾವಣೆ ನಡೆಯಲಿದೆ ಎಂದು ಹೇಳಿರುವ ಕೋಲ್ಕತಾ ಹೈಕೋರ್ಟ್ ಈ ಸಂಬಂಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.

ಈ ಸಂಬಂಧ ದಾಖಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಕೋಲ್ಕತಾ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಆರ್ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸೆಪ್ಟೆಂಬರ್ 30 ರಂದು ನಿಗದಿಯಂತೆ ಚುನಾವಣೆ ನಡೆಯಲಿದೆ ಎಂದು ಆದೇಶಿಸಿದೆ.

ಅಂತೆಯೇ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಭವಾನಿಪುರದಲ್ಲಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು ಅಂತಹ ಪತ್ರ ಬರೆದಿರುವುದು ಸೂಕ್ತವಲ್ಲ ಎಂದು  ಪೀಠ ಹೇಳಿದೆ. ಇದರಲ್ಲಿ ಉಪಚುನಾವಣೆ ಕುರಿತು ಬಳಸಿದ ಭಾಷೆಯನ್ನು ಪ್ರಶ್ನಿಸಲಾಯಿತು. ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಭವಾನಿಪುರಕ್ಕೆ ಉಪ ಚುನಾವಣೆ ನಡೆಯದಿದ್ದರೆ "ಸಾಂವಿಧಾನಿಕ ಬಿಕ್ಕಟ್ಟು" ಉಂಟಾಗುತ್ತದೆ ಎಂದು ಹೇಳಿದ್ದರು. ಇದೇ ಪದಕ್ಕೆ ನ್ಯಾಯಾಲಯ ಅಕ್ಷೇಪ ವ್ಯಕ್ತಪಡಿಸಿದೆ.

ಇನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಲ್ಲಿ ಗೆದ್ದರೆ ಮಾತ್ರ ಅವರು ಸಿಎಂ ಗಾದಿಯಲ್ಲಿ ಮುಂದುವರೆಯಲಿದ್ದಾರೆ.
 

SCROLL FOR NEXT