ಅಮರಿಂದರ್ ಸಿಂಗ್ 
ದೇಶ

ಅಮಿತ್ ಶಾ ಜೊತೆ ಚರ್ಚಿಸಿದ್ದೇನು?: ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿದ ಅಮರಿಂದರ್ ಸಿಂಗ್

ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ದಿಢೀರ್ ಬೆಳವಣಿಗೆಯಲ್ಲಿ ಸೆ.29 ರಂದು ರಾತ್ರಿ ಅಮಿತ್ ಶಾ ಅವರ ನಿವಸಕ್ಕೆ ತೆರಳಿ ಚರ್ಚೆ ನಡೆಸಿದ್ದು ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಆಹಾರವಾಗಿದೆ.

ನವದೆಹಲಿ: ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ದಿಢೀರ್ ಬೆಳವಣಿಗೆಯಲ್ಲಿ ಸೆ.29 ರಂದು ರಾತ್ರಿ ಅಮಿತ್ ಶಾ ಅವರ ನಿವಸಕ್ಕೆ ತೆರಳಿ ಚರ್ಚೆ ನಡೆಸಿದ್ದು ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಆಹಾರವಾಗಿದೆ.

ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಅಮರಿಂದರ್ ಸಿಂಗ್, "ಅಮಿತ್ ಶಾ ಜೊತೆ ರೈತರ ಪ್ರತಿಭಟನೆ ವಿಷಯವಾಗಿ ಚರ್ಚಿಸಿದೆ" ಎಂದು ತಿಳಿಸಿದ್ದಾರೆ

ಅಮರಿಂದರ್ ಸಿಂಗ್-ಅಮಿತ್ ಶಾ ಅವರ ಭೇಟಿಯ ಬಗ್ಗೆ ತೀವ್ರವಾಗಿ ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷ, "ಅಮರಿಂದರ್ ಸಿಂಗ್ ಅವರ ನಿವಾಸ ದಲಿತ ವಿರೋಧಿ ರಾಜಕಾರಣದ ಹೊಸ ಕೇಂದ್ರವಾಗಿದೆ" ಎಂದು ಹೇಳಿದೆ.

ಅಮರಿಂದರ್ ಸಿಂಗ್ ಅವರ ನಡೆಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನ ವಕ್ತಾರ ರಣ್ದೀಪ್ ಸುರ್ಜೆವಾಲ ಪಂಜಾಬ್ ನ ಮುಖ್ಯಮಂತ್ರಿಯನ್ನಾಗಿ ದಲಿತರನ್ನು ನೇಮಕ ಮಾಡಿದಾಗಿನಿಂದಲೂ ಅಧಿಕಾರದಲ್ಲಿರುವವರ ಅಹಂಕಾರಕ್ಕೆ ಪೆಟ್ಟು ಬಿದ್ದಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಇತ್ತ ಕಪಿಲ್ ಸಿಬಲ್ ಅವರ ಹೇಳಿಕೆಯ ಬಗ್ಗೆಯೂ ಕಾಂಗ್ರೆಸ್ ನ ವಕ್ತಾರರು ಕಟುವಾಗಿ ಟೀಕಿಸಿದ್ದು, " ದಲಿತನೋರ್ವನನ್ನು ಸಿಎಂ ಮಾಡಿದರೆ, "ಕಾಂಗ್ರೆಸ್ ನಲ್ಲಿ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಬಂದಿದೆ, ದಲಿತರನ್ನು ಸಿಎಂ ಮಾಡಿದ್ದಕ್ಕಾಗಿ ಕೆಲವರ ಅಹಂಕಾರಕ್ಕೆ ಪೆಟ್ಟು ಬಿದ್ದಿದೆ" ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಗಾಂಧಿ ನಾಯಕತ್ವವನ್ನು ಪ್ರಶ್ನಿಸಿದ್ದ ಜಿ-23 ಗುಂಪಿನ ಪೈಕಿ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಚುನಾಯಿತ ಅಧ್ಯಕ್ಷರೇ ಇಲ್ಲ. ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟಿದ್ದರು. ಈ ಬೆನ್ನಲ್ಲೇ ಈ ಬೆಳವಣಿಗೆಯೂ ಸಂಭವಿಸಿದ್ದು ಅಮರಿಂದರ್ ಸಿಂಗ್ ಅವರ ನಿವಾಸವನ್ನು ಕಾಂಗ್ರೆಸ್ ದಲಿತ ವಿರೋಧಿ ರಾಜಕಾರಣದ ಹೊಸ ಕೇಂದ್ರ ಎಂದು ಹೇಳಲು ಪ್ರಾರಂಭಿಸಿದೆ.

ಅಮಿತ್ ಶಾ ಹಾಗೂ ಮೋದಿ ಪಂಜಾಬ್ ನ ಪ್ರತೀಕಾರದ ಬೆಂಕಿಯಲ್ಲಿ ಸುಡುತ್ತಿದ್ದಾರೆ. ತಮ್ಮ ಬಂಡವಾಳ ಶಾಹಿ ಸ್ನೇಹಿತರ ಹಿತಾಸಕ್ತಿಗಳನ್ನು ಪೂರೈಕೆ ಮಾಡಲು ರೈತ ವಿರೋಧಿ ಕಾನೂನಿಗೆ ಅಡ್ಡಿಯಾಗುತ್ತಿರುವ ಪಂಜಾಬ್ ಮೇಲೆ ಸೇಡು ತೀರಿಸಿಕೊಳ್ಳಲು ಮೋದಿ- ಅಮಿತ್ ಶಾ ಬಯಸುತ್ತಿದ್ದಾರೆ ಎಂದು ಸುರ್ಜೆವಾಲ ಟ್ವೀಟ್ ಮಲಕ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರ ರಾಜಕಾರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್! BMC ಯಲ್ಲಿ ಬದ್ಧ- ವೈರಿಗಳು ಒಂದಾಗುವ ಸಾಧ್ಯತೆ?

ಮಹಿಳಾ ಅಧಿಕಾರಿಗೆ ಧಮ್ಕಿ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

"ಒಂದು ಕುಟುಂಬಕ್ಕಾಗಿ" DMK ಸರ್ಕಾರ ಕೆಲಸ ಮಾಡುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

'ಥಾಣೆ ಕೇಸರಿ ಬಣ್ಣದಲ್ಲಿದ್ದು, ಅದೇ ಬಣ್ಣದಲ್ಲೇ ಉಳಿಯಲಿದೆ': AIMIM ನಾಯಕಿಯ 'ಹಸಿರೀಕರಣ' ಹೇಳಿಕೆಗೆ ಡಿಸಿಎಂ ಏಕನಾಥ್ ಶಿಂಧೆ ತಿರುಗೇಟು!

ರಾಜ್ಯಪಾಲರಿಗೆ ಅವಮಾನ: ಬಿಕೆ ಹರಿಪ್ರಸಾದ್​​ ಅಮಾನತಿಗೆ ಬಿಜೆಪಿ ಪಟ್ಟು; ಪರಿಷತ್ ರಣಾಂಗಣ

SCROLL FOR NEXT