ದೇಶ

ನೆಹರು, ವಾಜಪೇಯಿಯವರ ಮೂರ್ಖತನದಿಂದ ಭಾರತೀಯರು ಟಿಬೆಟ್, ತೈವಾನ್ ಅನ್ನು ಚೀನಾಕ್ಕೆ ಬಿಟ್ಟುಕೊಟ್ಟರು: ಸುಬ್ರಮಣಿಯನ್ ಸ್ವಾಮಿ

Ramyashree GN

ನವದೆಹಲಿ: ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ಭಾರತೀಯರು ಟಿಬೆಟ್ ಮತ್ತು ತೈವಾನ್‌ ಅನ್ನು ಚೀನಾದ ಭಾಗವೆಂದು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಬುಧವಾರ ಟೀಕಿಸಿದ್ದಾರೆ.

ಈಗ ಚೀನಾ ಪರಸ್ಪರ ಒಪ್ಪಿದ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಸಹ ಗೌರವಿಸುವುದಿಲ್ಲ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ಈಗಾಗಲೇ ವಶಪಡಿಸಿಕೊಂಡಿದೆ ಎಂದು ಹೇಳಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದರು. ಚೀನಾ 'ಲಡಾಖ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಆದರೆ, ಮೋದಿ 'ಕೋಯಿ ಆಯಾ ನಹೀನ್' ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

'ನೆಹರು ಮತ್ತು ವಾಜಪೇಯಿ ಅವರ ಮೂರ್ಖತನದಿಂದಾಗಿ ನಾವು ಭಾರತೀಯರು ಟಿಬೆಟ್ ಮತ್ತು ತೈವಾನ್ ಚೀನಾದ ಭಾಗವೆಂದು ಒಪ್ಪಿಕೊಂಡಿದ್ದೇವೆ. ಆದರೆ ಈಗ ಚೀನಾ, ಉಭಯ ದೇಶಗಳು ಪರಸ್ಪರ ಒಪ್ಪಿದ ಎಲ್‌ಎಸಿಯನ್ನು ಗೌರವಿಸುತ್ತಿಲ್ಲ ಮತ್ತು ಲಡಾಖ್‌ನ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದೆ. ಆದರೆ, ಮೋದಿ ಅವರು ತಮ್ಮ ಮಂಪರಿನಲ್ಲಿ 'ಕೋಯಿ ಆಯಾ ನಹೀನ್' ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾವು ನಿರ್ಧರಿಸಲು ಚುನಾವಣೆಗಳಿವೆ ಎಂಬುದನ್ನು ಚೀನಾ ತಿಳಿದಿರಬೇಕು' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಚೀನಾದ ಪುನರಾವರ್ತಿತ 'ಎಚ್ಚರಿಕೆ'ಗಳ ಹೊರತಾಗಿಯೂ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇಂದು ತೈವಾನ್‌ಗೆ ಭೇಟಿ ನೀಡಿದ್ದಾರೆ. ಈ ಮಧ್ಯೆ ಸ್ವಾಮಿ ಅವರ ಹೇಳಿಕೆ ಬಂದಿದೆ.

SCROLL FOR NEXT