ದೇಶ

ಅಹ್ಮದಾಬಾದ್-ಚಂಡೀಗಢ ಮಾರ್ಗದ ವಿಮಾನಕ್ಕೆ ಹಕ್ಕಿ ಢಿಕ್ಕಿ; ಮಾರ್ಗ ಬದಲಾವಣೆ

Srinivas Rao BV

ಅಹ್ಮದಾಬಾದ್:ಅಹ್ಮದಾಬಾದ್ ನಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಗೋ ಫಸ್ಟ್ ವಿಮಾನಕ್ಕೆ ಹಕ್ಕಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮಾರ್ಗವನ್ನು ಬದಲಾವಣೆ ಮಾಡಲಾಯಿತು.
 
ಡಿಜಿಸಿಎ ನೀಡಿರುವ ಮಾಹಿತಿಯ ಪ್ರಕಾರ, ಜಿ8-911 ವಿಮಾನದ ಇಂಜಿನ್ ನಂ.1 ಗೆ ಹಕ್ಕಿ ಢಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ.

ಇದನ್ನೂ ಓದಿ: 8 ವಾರಗಳ ಕಾಲ ಶೇ. 50 ರಷ್ಟು ವಿಮಾನ ಕಾರ್ಯ ನಿರ್ವಹಿಸುವಂತೆ ಸ್ಪೈಸ್‍ಜೆಟ್‍ಗೆ ಡಿಜಿಸಿಎ ಆದೇಶ
  
ಕಳೆದ ಕೆಲವು ವಾರಗಾಳಿಂದ ವಿಮಾನಗಳಲ್ಲಿ ಹಲವು ತಾಂತ್ರಿಕ ದೋಷಗಳು ಕಾಣಿಸಿಕೊಳ್ಳಲಾರಂಭಿಸಿದೆ. ಸರ್ಕಾರಿ ಡೇಟಾ ಪ್ರಕಾರ ಒಂದು ವರ್ಷದ ಅವಧಿಯಲ್ಲಿ (ಜುಲೈ 1, 2021 ರಿಂದ ಜೂ.30, 2022 ರ ವರೆಗೆ) 478 ತಾಂತ್ರಿಕ ದೋಷಗಳು ಕಂಡುಬಂದಿದೆ. 

ಕಾರ್ಯಾಚರಣೆ ವೇಳೆ ವಿಮಾನದಲ್ಲಿ ಹಲವು ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿದ್ದು, ವಿಮಾನಕ್ಕೆ ಹಾಕಲಾಗಿರುವ ಉಪಕರಣಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಈ ರೀತಿಯ ದೋಷಗಳು ಉಂಟಾಗುತ್ತಿದ್ದು, ಸರಿಪಡಿಸಿಕೊಳ್ಳುವ ಕ್ರಮವನ್ನು ವಿಮಾನಯಾನ ಸಂಸ್ಥೆಗಳು ಕೈಗೊಳ್ಳಬೇಕಿದೆ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

SCROLL FOR NEXT