ದೇಶ

ಗುಜರಾತ್ ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ 1,000 ರೂ. ಮಾಸಿಕ ಭತ್ಯೆ: ಕೇಜ್ರಿವಾಲ್

Nagaraja AB

ಗಾಂಧಿನಗರ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 1,000 ರೂ. ತಿಂಗಳ ಭತ್ಯೆ ನೀಡಲಾಗುವುದು ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಭರವಸೆ ನೀಡಿದ್ದಾರೆ.

ಗುಜರಾತ್ ಚುನಾವಣಾ ಪ್ರಚಾರದ ಭಾಗವಾಗಿ ಕೇಜ್ರಿವಾಲ್ ಜನರಿಗೆ ನೀಡುತ್ತಿರುವ ಐದನೇ ಭರವಸೆ ಇದಾಗಿದೆ. ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ನಡೆಯಲಿದೆ.

ಮಹಿಳೆಯರಿಗೆ ಪುಕ್ಕಟೆಯಾಗಿ 1,000 ರೂ.( ತಿಂಗಳ ಭತ್ಯೆ) ನೀಡುತ್ತಿಲ್ಲ. ಇದು ನಿಮ್ಮ ಹಕ್ಕು. ಜನರ ದುಡ್ಡು, ಜನರಿಗೆ ಹೋಗಲಿ, ಸ್ವೀಸ್ ಬ್ಯಾಂಕ್ ಗೆ ಹೋಗುವುದು ಬೇಡ ಎಂದು ನೂರಾರು ಮಹಿಳೆಯರ ಮುಂದೆ ಕೇಜ್ರಿವಾಲ್ ಪ್ರಕಟಿಸಿದರು. 

ಈ ಹಿಂದೆ ಎಎಪಿ ಅಧಿಕಾರಕ್ಕೆ ಬಂದರೆ  ಪ್ರತಿಯೊಂದು ಕುಟುಂಬಕ್ಕೆ 300 ಯೂನಿಟ್ ಉಚಿತ ವಿದ್ಯುತ್ ಮತ್ತು ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ರೂ. 3,000 ಭತ್ಯೆ ನೀಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದರು.

SCROLL FOR NEXT