ದೇಶ

ಬಿಗ್ ಬುಲ್ ಖ್ಯಾತಿಯ ಷೇರುಪೇಟೆ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ನಿಧನ: ಪ್ರಧಾನಿ ಮೋದಿ ಸಂತಾಪ

Sumana Upadhyaya

ನವದೆಹಲಿ: ಭಾರತದ ವಾರನ್ ಬಫೆಟ್ ಎಂದು ಕೀರ್ತಿ ಗಳಿಸಿದ್ದ ಬಿಗ್ - ಬುಲ್ ಖ್ಯಾತಿಯ ಷೇರುಪೇಟೆ ಹೂಡಿಕೆದಾರ, ಆಕಾಸಾ ವಿಮಾನಯಾನ ಸಂಸ್ಥಾಪಕ ರಾಕೇಶ್​ ಜುಂಜುನ್ವಾಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಅವರಿಗೆ 62 ವರ್ಷ ವಯಸ್ಸಾಗಿತ್ತು. ರಾಕೇಶ್ ಜುಂಜುನ್ವಾಲಾ ಅವರ ಆಕಾಸಾ ಏರ್​ಲೈನ್ಸ್​ ಕಳೆದ ಆಗಸ್ಟ್ 7 ರಂದು ಚಾಲನೆ ಕಂಡಿತ್ತು. ಫೋರ್ಬ್ಸ್ ಪಟ್ಟಿಯ ಪ್ರಕಾರ, 2021 ರಲ್ಲಿ ಭಾರತದ 36ನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 438ನೇ ಶ್ರೀಮಂತ ವ್ಯಕ್ತಿಯಾಗಿದ್ದರು.

ಇನ್ನು ರಾಕೇಶ್​ ಜುಂಜುನ್ವಾಲಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.ರಾಕೇಶ್ ಜುಂಜುನ್ವಾಲಾ ಅವರದ್ದು ಅದಮ್ಯ ವಕ್ತಿತ್ವ. ಪೂರ್ಣ ಜೀವನ, ಹಾಸ್ಯ ಮತ್ತು ಒಳನೋಟವುಳ್ಳ ಅವರು ಆರ್ಥಿಕ ಜಗತ್ತಿಗೆ ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗುತ್ತಾರೆ. ಅವರು ಭಾರತದ ಪ್ರಗತಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರ ಅಗಲಿಕೆ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. 

SCROLL FOR NEXT