ದೇಶ

76 ನೇ ಸ್ವಾತಂತ್ರ್ಯದಿನಾಚರಣೆಯ ದಿನ, ಪಿನ್ ಕೋಡ್ ಗೆ ತುಂಬಿತು 50 ವರ್ಷ!

Srinivas Rao BV

ಭಾರತ 76 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿರುವಾಗ ಭಾರತೀಯ ಅಂಚೆಗೆ ಸಂಭ್ರಮಾಚರಣೆಯಲ್ಲಿ ತೊಡಗಲು ಮತ್ತೊಂದು ಕಾರಣವಿದೆ.

ಅಂಚೆ ಕಚೇರಿಗೆ ಸಂಬಂಧಿಸಿದ 6 ಸಂಖ್ಯೆಗಳ ಪಿನ್ ಕೋಡ್ ಗೆ ಭರ್ತಿ 50 ವರ್ಷಗಳು ತುಂಬಿದೆ! ಇಂದು ಬಹುತೇಕ ಸಂಗತಿಗಳು, ಆನ್ ಲೈನ್ ಮೂಲಕವೇ ನಡೆಯುತ್ತಿದ್ದು, ಪೋಸ್ಟಲ್ ಇಂಡೆಕ್ಸ್ ನಂಬರ್ 50 ವರ್ಷಗಳೇ ಕಳೆದರೂ ಇನ್ನೂ ಪ್ರಸ್ತುವಾಗಿ ಉಳಿದಿದೆ. 

ಪೋಸ್ಟಲ್ ಇಂಡೆಕ್ಸ್ ನಂಬರ್ ನ್ನು 1972 ರ ಆಗಸ್ಟ್ 15 ರಂದು ಸೇವೆಗೆ ಮುಕ್ತಗೊಳಿಸಲಾಗಿತ್ತು. ಈಗಲೂ ಆನ್ ಲೈನ್ ಮೂಲಕ ತರಿಸಿಕೊಳ್ಳುವುದಿರಬಹುದು, ಪೋಸ್ಟ್ ಕಳಿಸುವುದಿರಬಹುದು, ಈಗಲೂ 6 ಸಂಖ್ಯೆಗಳು ಮನೆ ಬಾಗಿಲಿಗೆ ವಸ್ತುಗಳನ್ನು ತಲುಪಿಸುವುದರಲ್ಲಿ ನಿರ್ಣಾಯಕ ಪಾತ್ರ ಹೊಂದಿರುತ್ತವೆ. 

ಸೂಕ್ತ ಪಿನ್ ಕೋಡ್ ಇಲ್ಲದೇ ಪೋಸ್ಟ್ ಮ್ಯಾನ್ ಸಹ ಸರಿಯಾದ ವಿಳಾಸ ಹುಡುವುದಕ್ಕೆ ಸಾಧ್ಯವಾಗುವುದಿಲ್ಲ. ಪಿನ್ ಪಾಲ್ಸ್ ಕ್ಲಬ್ ನ್ನು ಜನಪ್ರಿಯಗೊಳಿಸುವಲ್ಲಿ ಕೇರಳದ ಅಂಚೆ ಸೇವೆಗಳ (ಕೇಂದ್ರ ಕಚೇರಿ) ನಿರ್ದೇಶಕ ಕೆಕೆ ದೇವಿಸ್ ಪ್ರಮುಖ ಪಾತ್ರ ವಹಿಸಿದ್ದು,  ಈ ಕ್ಲಬ್ ನಲ್ಲಿ ಈಗ 600 ಮಂದಿ ಇದ್ದು, ದೇಶಾದ್ಯಂತ ಪಿನ್ ಕೋಡ್ ಗಳನ್ನು ಜನಪ್ರಿಯಗೊಳಿಸಲಾಗುತ್ತಿದೆ. 

ಪಿನ್ ಕೋಡ್ ಏನನ್ನು ಪ್ರತಿನಿಧಿಸುತ್ತದೆ. 

ಪಿನ್ ಕೋಡ್ ನ ಮೊದಲ ಸಂಖ್ಯೆ ಪ್ರದೇಶವನ್ನು, ಎರಡನೆಯದ್ದು ಉಪ-ಪ್ರದೇಶವನ್ನು ಹಾಗೂ ಮೂರನೆಯದ್ದು ಕಂದಾಯ ಜಿಲ್ಲೆಯನ್ನು ಹಾಗೂ ಕೊನೆಯ ಮೂರು ಸಂಖ್ಯೆಗಳು ಡೆಲಿವರಿ ಪೋಸ್ಟ್ ಆಫೀಸ್ ಗೆ ಸಂಬಂಧಿಸಿದ್ದಾಗಿದೆ. ಭಾರತ 9 ಪಿನ್ ಪ್ರದೇಶಗಳನ್ನು ಹೊಂದಿದ್ದು, ಮೊದಲ 8 ಭೌಗೋಳಿಕ ಪ್ರದೇಶಗಳಾಗಿದ್ದರೆ, 9 ನೆಯದ್ದನ್ನು ಸೇನಾ ಪೋಸ್ಟಲ್ ಸೇವೆಗಳಿಗೆ ಮೀಸಲಿಡಲಾಗಿದೆ. 

SCROLL FOR NEXT