ಕುಸಿದ ಕಟ್ಟಡ 
ದೇಶ

ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಅದೃಷ್ಣವಶಾತ್ ಪ್ರಾಣಹಾನಿ ಇಲ್ಲ!

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಣವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಣವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮುಂಬೈನ ಪಶ್ಚಿಮ ಬೊರಿವಲಿಯಲ್ಲಿರುವ ಸಾಯಿಬಾಬಾ ನಗರದಲ್ಲಿ ನಾಲ್ಕು ಅಂತಸ್ತಿನ ಗೀತಾಂಜಲಿ ಕಟ್ಟಡ ಕುಸಿದು ಬಿದ್ದಿದೆ. ತುಂಬಾ ಹಳೆಯ ಕಟ್ಟಡ ಇದಾಗಿದ್ದು, ತುಂಬಾ ದಿನಗಳಿಂದ ಖಾಲಿ ಇತ್ತು ಎನ್ನಲಾಗಿದೆ. ಕಟ್ಟಡ ಕುಸಿತದ ವೇಳೆ ಕಟ್ಟಡ ಸಮೀಪ ಯಾರೂ ಇರಲಿಲ್ಲ. ಹೀಗಾಗಿ ಸಂಭಾವ್ಯ ಸಾವು-ನೋವು ತಪ್ಪಿದೆ ಎನ್ನಲಾಗಿದೆ.

ವಿಚಾರ ತಿಳಿಯುತ್ತಲೇ ಅಗ್ನಿಶಾಮಕ ದಳ ದೌಡಾಯಿಸಿದ್ದು, ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಶಿಥಿಲಗೊಂಡಿರುವ ಈ ಕಟ್ಟಡ ಬೀಳುವ ಹಂತದಲ್ಲಿದ್ದು ಜನರನ್ನು ಅಲ್ಲಿಂದ ಖಾಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದಾರೆಯೇ ಎಂದು ಅಗ್ನಿಶಾಮಕ ದಳ ಪರಿಶೀಲನೆ ಮಾಡುತ್ತಿದೆ. ಎಂಟು ಅಗ್ನಿಶಾಮಕದಳದ ವಾಹನ, ಎರಡು ರಕ್ಷಣಾ ದಳದ ವ್ಯಾನ್, ಮೂರು ಆಂಬುಲೆನ್ಸ್ ಘಟನಾ ಸ್ಥಳದಲ್ಲಿವೆ ಎನ್ನಲಾಗಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನ ಆರ್-ಸೆಂಟ್ರಲ್ ವಾರ್ಡ್ ನೀಡಿದ ಮಾಹಿತಿಯ ಪ್ರಕಾರ, ಕಟ್ಟಡವು ಶಿಥಿಲವಾಗಿದೆ ಎಂದು ಈ ಹಿಂದೆಯೇ ಘೋಷಿಸಲಾಗಿತ್ತು ಮತ್ತು ಅದನ್ನು ಖಾಲಿ ಮಾಡಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹಳ್ಳ ಹಿಡೀತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

ಮಧ್ಯಸ್ಥಿಕೆ ಯಾರೇ ವಹಿಸಲಿ ಅದರಿಂದ ಭಾರತಕ್ಕೇ ಲಾಭ! US ಜೊತೆ ಅಂಥಹ ಸಂಬಂಧ ಬೆಳಸಲು ಪಾಕ್ ಗೆ ಮಾತ್ರ ಸಾಧ್ಯ, ಬೇರಾರಿಗೂ ಅಲ್ಲ: ತರೂರ್ ವ್ಯಂಗ್ಯ

SCROLL FOR NEXT