ಜೈಲಿನಿಂದ ಹೊರಬಂದ ಅಪರಾಧಿಗಳಿಗೆ ಮಹಿಳೆಯರಿಂದ ಸನ್ಮಾನ 
ದೇಶ

'ಜೈಲಿನಿಂದ ಹೊರಬಂದ ಅಪರಾಧಿಗಳನ್ನು ಸನ್ಮಾನಿಸಿದ್ದು ಕೀಳು ಅಭಿರುಚಿಯನ್ನು ತೋರಿಸುತ್ತದೆ': ಬಿಲ್ಕಿಸ್ ಬಾನೋ ಪ್ರಕರಣದ ನ್ಯಾಯಾಧೀಶ

ಶಿಕ್ಷೆಗೆ ವಿನಾಯಿತಿ ನೀಡುವುದು ಸರ್ಕಾರದ ಅಧಿಕಾರದ ಮಿತಿಯೊಳಪಟ್ಟಿದೆ. ಆದರೆ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಜೈಲಿನಿಂದ ಹೊರಗೆ ಬಂದ ನಂತರ ಅವರನ್ನು ಅಭಿನಂದಿಸಿರುವ ರೀತಿ ಅಸಹ್ಯಕರವಾಗಿದೆ ಎಂದು 14 ವರ್ಷಗಳ ಹಿಂದೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈ: ಶಿಕ್ಷೆಗೆ ವಿನಾಯಿತಿ ನೀಡುವುದು ಸರ್ಕಾರದ ಅಧಿಕಾರದ ಮಿತಿಯೊಳಪಟ್ಟಿದೆ. ಆದರೆ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಜೈಲಿನಿಂದ ಹೊರಗೆ ಬಂದ ನಂತರ ಅವರನ್ನು ಅಭಿನಂದಿಸಿರುವ ರೀತಿ ಅಸಹ್ಯಕರವಾಗಿದೆ ಎಂದು 14 ವರ್ಷಗಳ ಹಿಂದೆ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.

2002ರಲ್ಲಿ ಗೋಧ್ರಾ ಹತ್ಯಾಕಾಂಡ ಸಮಯದಲ್ಲಿ ಬಿಲ್ಕಿಸ್ ಬಾನೊ ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಎದುರಿಸಿದ್ದ 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ನಿರ್ಧಾರ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಡುಗಡೆಯ ನಂತರ ಸ್ಥಳೀಯ ನಾಯಕರು ಅವರನ್ನು ಸನ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಿಕ್ಷೆಯ ಪ್ರಮಾಣ ವಿಧಿಸುವುದರಲ್ಲಿ ಹೆಚ್ಚಿಗೆ ವಿಶೇಷ ನಾನು ಅಂದು ಮಾಡಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ತೀರ್ಪು ಕೊಡುವುದು ನನ್ನ ಕರ್ತವ್ಯವಾಗಿತ್ತು ಎಂದು ಬಿಲ್ಕಿಸ್ ಬಾನೊ ಅವರ ಪರವಾಗಿ ಸೌಜನ್ಯತೆ ತೋರುತ್ತಾ ನಿವೃತ್ತ ನ್ಯಾಯಾಧೀಶ ಯು ಡಿ ಸಲ್ವಿ ನಿನ್ನೆ ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ಅಪರಾಧಿಗಳಿಗೆ ಪರಿಹಾರವನ್ನು ನೀಡುವ ಹಕ್ಕು ರಾಜ್ಯಕ್ಕೆ ಇದೆ. ಇದು ಕಾನೂನಿನಡಿಯಲ್ಲಿ ರಾಜ್ಯಕ್ಕೆ ನೀಡಲಾದ ಅಧಿಕಾರವಾಗಿದೆ, ಅವಧಿಪೂರ್ವ ಅಪರಾಧಿಗಳನ್ನು ಬಿಡುಗಡೆ ಮಾಡಿದ ಸರ್ಕಾರದ ನಿರ್ಧಾರಕ್ಕೆ ನಾನು ಪ್ರತಿಕ್ರಿಯೆ ಹೇಳಿಕೆ ನೀಡಲು ಆಗುವುದಿಲ್ಲ.  ಯಾವ ಮಾನದಂಡ ಮೇಲೆ ಅಪರಾಧಿಗಳನ್ನು ಬಿಡುಗಡೆ ಮಾಡಿದರು ಎಂದು ನನಗೆ ಗೊತ್ತಿಲ್ಲ, ಸಂಬಂಧಪಟ್ಟ ವರದಿಗಳನ್ನು ನೋಡಿಲ್ಲ ಎಂದಿದ್ದಾರೆ.

ಆದರೆ ಜೈಲಿನಿಂದ ಬಿಡುಗಡೆಯಾಗಿ ಬಂದವರನ್ನು ಸನ್ಮಾನಿಸಿದ್ದು ಒಂದು ಕೀಳು ಅಭಿರುಚಿಯನ್ನು ತೋರಿಸುತ್ತದೆ. ಅಪರಾಧಿಗಳು ಕೂಡ ಸನ್ಮಾನವನ್ನು ಸ್ವೀಕರಿಸಬಾರದಿತ್ತು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ.

ಮೊನ್ನೆ ಆಗಸ್ಟ್ 15 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಿದ ನಂತರ ಹನ್ನೊಂದು ಅಪರಾಧಿಗಳು ಗೋಧ್ರಾ ಉಪ ಜೈಲಿನಿಂದ ಹೊರಬಂದಿದ್ದಾರೆ. ತನಗೆ ಬೆದರಿಕೆಗಳು ಬರುತ್ತಿವೆ ಎಂದು ಬಾನೋ ಹೇಳಿಕೊಂಡ ನಂತರ 2004 ರಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸಿತು.

ಅಂದಿನ ನ್ಯಾಯಾಧೀಶ ಸಾಲ್ವಿ ಅವರ ಅಧ್ಯಕ್ಷತೆಯಲ್ಲಿ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಜನವರಿ 21, 2008 ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

SCROLL FOR NEXT