ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ 
ದೇಶ

58 ಬಾರಿ ಕರೆ ಮಾಡಿ ಚಿತ್ರಹಿಂಸೆ; ಮದ್ರಾಸ್ ಲಾಯರ್ ಗೆ 2 ಲಕ್ಷ ರೂ. ಪರಿಹಾರ ನೀಡಲು ಬ್ಯಾಂಕ್ ಗೆ ನಿರ್ದೇಶನ

ಗ್ರಾಹಕರೊಬ್ಬರು ಕ್ರೆಡಿಟ್ ಕಾರ್ಡ್ ನ ಬಾಕಿ ಮೊತ್ತವನ್ನು ಸೂಕ್ತ ಸಮಯದಲ್ಲಿ ಪಾವತಿ ಮಾಡಿದ್ದರೂ, ಕರೆ/ ಮೆಸೇಜ್  ಮಾಡಿ ಹಣ ಪಾವತಿಸುವಂತೆ ಚಿತ್ರ ಹಿಂಸೆ ನೀಡುತ್ತಿದ್ದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಗ್ರಾಹಕ ಆಯೋಗ ನಿರ್ದೇಶನ ನೀಡಿದೆ. 

ಬೆಂಗಳೂರು: ಗ್ರಾಹಕರೊಬ್ಬರು ಕ್ರೆಡಿಟ್ ಕಾರ್ಡ್ ನ ಬಾಕಿ ಮೊತ್ತವನ್ನು ಸೂಕ್ತ ಸಮಯದಲ್ಲಿ ಪಾವತಿ ಮಾಡಿದ್ದರೂ, ಕರೆ/ ಮೆಸೇಜ್ ಮಾಡಿ ಹಣ ಪಾವತಿಸುವಂತೆ ಚಿತ್ರ ಹಿಂಸೆ ನೀಡುತ್ತಿದ್ದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಗ್ರಾಹಕ ಆಯೋಗ ನಿರ್ದೇಶನ ನೀಡಿದೆ. 

ಮದ್ರಾಸ್ ನ ಲಾಯರ್ ಲೋಕನಾಥನ್ ಜಯಕುಮಾರ್ ಗೆ ಬ್ಯಾಂಕ್ ಬರೊಬ್ಬರಿ 58 ಬಾರಿ ಕರೆ/ ಮೆಸೇಜ್ ಗಳನ್ನು ಮಾಡಿ ಚಿತ್ರ ಹಿಂಸೆ ನೀಡಿತ್ತು. 

ಗ್ರಾಹಕರು ಸೂಕ್ತ ಸಮಯದಲ್ಲಿ ಹಣ ಪಾವತಿಸಿದ್ದರೂ ಬ್ಯಾಂಕ್ ನ ಲೋಪದೋಷಗಳು ಸ್ಪಷ್ಟವಾಗಿದ್ದರಿಂದ ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸಂತ್ರಸ್ತ ವ್ಯಕ್ತಿಗೆ 2 ಲಕ್ಷ ರೂಪಾಯಿ ಮೊತ್ತಕ್ಕೆ ಪ್ರತಿ ವರ್ಷಕ್ಕೆ ಶೇ.8 ರಷ್ಟು ಬಡ್ಡಿ ಸೇರಿಸಿ ಪರಿಹಾರವನ್ನು ನೀಡಬೇಕು ಜೊತೆಗೆ ದಾವೆ ವೆಚ್ಚಗಳಿಗಾಗಿ ಹೆಚ್ಚುವರಿ 10,000 ರೂಪಾಯಿ ನೀಡಬೇಕು ಎಂದು ಆಯೋಗ ಸೂಚಿಸಿದೆ. 

75 ವರ್ಷದ ವಕೀಲ ಲೋಕನಾಥನ್ ಜಯಕುಮಾರ್, ಕೋರಮಂಗಲ ನಿವಾಸಿಯಾಗಿದ್ದು, 25 ವರ್ಷಗಳಿಂದ ಸ್ಟಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. ಬಾಕಿ ಪಾವತಿಸಬೇಕಿದ್ದ, 31,271 ರೂಪಾಯಿಗಳ ಹಣವನ್ನು ಗಡುವು ಮಿತಿಗೂ ಮುನ್ನವೇ 2022 ರ ಜನವರಿಯಂದು ಚೆಕ್ ಮೂಲಕ ಪಾವತಿಸಿದ್ದರು. 

ಕೆಲವು ದಿನಗಳ ನಂತರ ಬ್ಯಾಂಕ್ ಬಾಕಿ ಇರುವ ಹಣ ಪಾವತಿ ಮಾಡುವಂತೆ ನಿರಂತರವಾಗಿ ಕರೆ/ ಮೆಸೇಜ್ ಗಳ ಮೂಲಕ ಚಿತ್ರ ಹಿಂಸೆ ನೀಡಲಾರಂಭಿಸಿತು. ಈ ಹಿನ್ನೆಲೆಯಲ್ಲಿ ವಕೀಲರು ಆಯೋಗಕ್ಕೆ ದೂರು ನೀಡಿದ್ದರು. ಆಯೋಗದಿಂದ ನೊಟೀಸ್ ಜಾರಿಯಾದರೂ ಉತ್ತರಿಸದೇ ಇದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಲೋಪದೋಷ ಸಾಬೀತಾಗಿದ್ದು ದಂಡ ವಿಧಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ: RCB ಗೆ 18 ರನ್ ಗಳ ಭರ್ಜರಿ ಗೆಲುವು!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

SCROLL FOR NEXT