ದೇಶ

ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು; ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ: ಇಬ್ಬರು ಸಹಚರರ ವಿರುದ್ಧ ಕೊಲೆ ಆರೋಪ!

Vishwanath S

ಪಣಜಿ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ದೇಹದ ಮೇಲೆ ಹಲವು ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಉಲ್ಲೇಖಿಸಿದ ನಂತರ ಗೋವಾ ಪೊಲೀಸರು ಇಂದು ಸೋನಾಲಿಯ ಇಬ್ಬರು ಸಹಚರರ ವಿರುದ್ಧ ಕೊಲೆ ಆರೋಪ ದಾಖಲಿಸಿದ್ದಾರೆ.

42 ವರ್ಷದ ನಾಯಕಿ ಸಾವಿಗೆ ಸಂಬಂಧಿಸಿದ ಪ್ರಕರಣಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಅನ್ನು ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಆಗಸ್ಟ್ 22ರಂದು ಫೋಗಟ್ ಗೋವಾಕ್ಕೆ ಆಗಮಿಸಿದಾಗ ಅವರ ಜೊತೆಗಿದ್ದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ವಾಸಿ ಅವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಸಹೋದರ ರಿಂಕು ಧಾಕಾ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.

ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಫೋರೆನ್ಸಿಕ್ ತಜ್ಞರ ಸಮಿತಿಯು ಶವವನ್ನು ಶವಪರೀಕ್ಷೆ ನಡೆಸಿತು. GMCH ನ ಫೋರೆನ್ಸಿಕ್ ಸೈನ್ಸ್ ವಿಭಾಗದ ಡಾ ಸುನೀಲ್ ಶ್ರೀಕಾಂತ್ ಚಿಂಬೋಲ್ಕರ್ ಅವರು ತಮ್ಮ ವರದಿಯಲ್ಲಿ ಸಾವಿನ ಕಾರಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ಕಾಯ್ದಿರಿಸಿದ್ದಾರೆ.

'ನನ್ನ ಅತ್ಯುತ್ತಮ ಜ್ಞಾನ ಮತ್ತು ನಂಬಿಕೆಯಿಂದ ಸಾವಿನ ಕಾರಣವನ್ನು ರಾಸಾಯನಿಕ ವಿಶ್ಲೇಷಣೆಗೆ ಕಾಯ್ದಿರಿಸಲಾಗಿದೆ. ಹಿಸ್ಟೋಪಾಥಾಲಜಿ ಮತ್ತು ಅಂಗಾಂಶಗಳ ಸೆರೋಲಾಜಿಕಲ್ ವರದಿಗಳನ್ನು ಸಂರಕ್ಷಿಸಲಾಗಿದೆ ಎಂದು ವರದಿ ಹೇಳಿದೆ.

ಟಿಕ್‌ಟಾಕ್‌ ಖ್ಯಾತಿಯ ಫೋಗಟ್ ಅವರನ್ನು ಆಗಸ್ಟ್ 23ರಂದು ಉತ್ತರ ಗೋವಾ ಜಿಲ್ಲೆಯ ಅಂಜುನಾದ ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆತರಲಾಯಿತು. ಅವರಿಗೆ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮೊದಲು ತಿಳಿಸಿದ್ದರು. ಇದೀಗ ಗೋವಾ ಪೊಲೀಸರು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗುರುವಾರ ಪಣಜಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಸ್ಪಾಲ್ ಸಿಂಗ್ ಅವರು ತನಿಖೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.

ಮೂರು ವರ್ಷಗಳ ಹಿಂದೆ, ಆಕೆಯ ಸಹಾಯಕರೊಬ್ಬರು ಆಹಾರ ಸೇವಿಸಿದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ನಂತರ ಬ್ಲ್ಯಾಕ್‌ಮೇಲ್ ಮಾಡಿದ್ದರು ಎಂದು ಆಕೆಯ ಸಹೋದರ ಢಾಕಾ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಶೋನಾಲಿ ಫೋಗಟ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್‌ ಪಡೆದು ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಅವರು 2020 ರಲ್ಲಿ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು.

SCROLL FOR NEXT